ADVERTISEMENT

ಮಧ್ಯಪ್ರದೇಶ | ರೈತರಿಗೆ ₹5ಕ್ಕೆ ಶಾಶ್ವತ ವಿದ್ಯುತ್‌ ಸಂಪರ್ಕ: ಸಿಎಂ ಮೋಹನ್ ಯಾದವ್

ಪಿಟಿಐ
Published 2 ಮಾರ್ಚ್ 2025, 13:09 IST
Last Updated 2 ಮಾರ್ಚ್ 2025, 13:09 IST
<div class="paragraphs"><p>ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್  </p></div>

ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್

   

-ಪಿಟಿಐ ಚಿತ್ರ

ಭೋಪಾಲ್: ರೈತರಿಗೆ ₹5ಕ್ಕೆ ಶಾಶ್ವತ ವಿದ್ಯುತ್‌ ಸಂಪರ್ಕ ನೀಡುವುದಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಇಂದು (ಭಾನುವಾರ) ಘೋಷಿಸಿದ್ದಾರೆ.

ADVERTISEMENT

ಭೋಪಾಲ್‌ನಲ್ಲಿ ನಡೆದ ಸಭೆಯಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮಧ್ಯಪ್ರದೇಶ ಕೇಂದ್ರ ವಿದ್ಯುತ್‌ ವಿತರಣಾ ಕಂಪನಿ ಶೀಘ್ರದಲ್ಲೇ ಈ ಯೋಜನೆಯನ್ನು ಜಾರಿಗೊಳಿಸಲಿದೆ. ಶಾಶ್ವತ ವಿದ್ಯುತ್‌ ಸಂಪರ್ಕವಿಲ್ಲದ ರೈತರಿಗೆ ₹5ಕ್ಕೆ ಈ ಸೌಲಭ್ಯ ನೀಡಲಾಗುವುದು. ನಾವು ರೈತರಿಗೆ ಒಳ್ಳೆಯದನ್ನು ಮಾಡಲು ಮತ್ತು ಅವರ ಜೀವನವನ್ನು ಉತ್ತಮಗೊಳಿಸಲು ಬಯಸುತ್ತೇವೆ’ ಎಂದು ಹೇಳಿದ್ದಾರೆ.

ರೈತರಿಗೆ ನೀರಾವರಿ ಕೆಲಸಗಳಿಗೆ ಸೌರ ಪಂಪ್‌ಗಳನ್ನು ನೀಡುವ ಮೂಲಕ ವಿದ್ಯುತ್‌ ಸಂಬಂಧಿತ ತೊಂದರೆಗಳನ್ನು ನಿವಾರಿಸಲು ಸರ್ಕಾರ ಯೋಜಿಸಿದೆ. ಮುಂದಿನ ಮೂರು ವರ್ಷಗಳಲ್ಲಿ, ರೈತರಿಗೆ 30 ಲಕ್ಷ ನೀರಾವರಿ ಪಂಪ್‌ಗಳನ್ನು ಒದಗಿಸಲಾಗುವುದು. ಅಲ್ಲದೆ, ಸರ್ಕಾರವು ರೈತರಿಂದ ಸೌರಶಕ್ತಿಯನ್ನು ಖರೀದಿಸಲಿದೆ’ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಳ್ಳಿಗಳಿಗೆ ಸರಿಯಾದ ಮೂಲಸೌಕರ್ಯ, ವಿದ್ಯುತ್ ಮತ್ತು ರಸ್ತೆಗಳು ಇರಲಿಲ್ಲ. ಆದರೆ, ಬಿಜೆಪಿ ಆಡಳಿತದಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.