ADVERTISEMENT

ತಂದೆಯ ಗುಂಡೇಟಿಗೆ ಟೆನಿಸ್‌ ಆಟಗಾರ್ತಿಯಾಗಿದ್ದ ಮಗಳು ಸಾವು

ಪಿಟಿಐ
Published 10 ಜುಲೈ 2025, 13:25 IST
Last Updated 10 ಜುಲೈ 2025, 13:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುರುಗ್ರಾಮ: ಹರಿಯಾಣದ ರಾಜ್ಯಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರನ್ನು ಗುರುವಾರ ತಂದೆಯೇ ಗುಂಡಿಕ್ಕಿ ಕೊಂದಿದ್ದಾರೆ.

25 ವರ್ಷದ ರಾಧಿಕಾ ಅವರು ಇಲ್ಲಿನ ಸುಶಾಂತ್ ಲೋಕ್‌ನಲ್ಲಿರುವ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಆಕೆಯ ತಂದೆ 49 ವರ್ಷದ ದೀಪಕ್‌ ಯಾದವ್‌ ಅವರನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಪರವಾನಗಿ ಹೊಂದಿರುವ ಪಿಸ್ತೂಲ್‌ ವಶಪಡಿಸಿಕೊಂಡಿದ್ದಾರೆ. ಕೊಲೆಗೆ ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ. ರಾಧಿಕಾ ಅವರ ಬೆನ್ನಿಗೆ ಐದಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸಲಾಗಿದೆ ಎಂದು ಆರೋಪಿಸಲಾಗಿದೆ. 

ADVERTISEMENT

‘ಸುಶಾಂತ್ ಲೋಕ್‌ ಪ್ರದೇಶದಲ್ಲಿರುವ ಎರಡಂತಸ್ತಿನ ಮನೆಯಲ್ಲಿ ಘಟನೆ ನಡೆದಿದೆ. ರಾಧಿಕಾ ಅವರು ಅಡುಗೆ ಮನೆಯಲ್ಲಿದ್ದರೆ, ಅವರ ತಾಯಿ ಈ ವೇಳೆ ನೆಲಮಹಡಿಯಲ್ಲಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

‘ನಾವು ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದು, ತನಿಖೆ ಮುಂದುವರಿದಿದೆ. ಕೊಲೆಯ ಹಿಂದಿನ ಕಾರಣ ಏನೆಂಬುದು ಶೀಘ್ರದಲ್ಲೇ ತಿಳಿಯಲಿದೆ’ ಎಂದು ಸೆಕ್ಟರ್ 56 ಪೊಲೀಸ್ ಠಾಣಾಧಿಕಾರಿ ವಿನೋದ್ ಕುಮಾರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.