ಅಜಿತ್ ಅಂಜುಮ್
–ಫೇಸ್‌ಬುಕ್ ಚಿತ್ರ
ನವದೆಹಲಿ: ಬಿಹಾರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ವರದಿ ಮಾಡಿದ ಪತ್ರಕರ್ತ ಅಜಿತ್ ಅಂಜುಮ್ ವಿರುದ್ಧ ಎಫ್‌ಐಆರ್ ದಾಖಲಿಸಿದ ಕ್ರಮವನ್ನು ಭಾರತ ಎಡಿಟರ್ಸ್ ಗಿಲ್ಡ್ ಖಂಡಿಸಿದೆ. ಇದೊಂದು ‘ಅತಿಯಾದ ಕ್ರಮ’ ಎಂದು ಹೇಳಿದೆ.
ಬಿಹಾರದಲ್ಲಿ ವರದಿ ಮಾಡುತ್ತಿದ್ದ ಅಂಜುಮ್ ಮೇಲೆ ಎಫ್‌ಐಆರ್ ದಾಖಲಿಸಿದ್ದು ತೀವ್ರ ತೊಂದರೆಗೀಡು ಮಾಡಿದೆ ಎಂದು ಗಿಲ್ಡ್ ಪ್ರಕಟಣೆಯಲ್ಲಿ ತಿಳಿಸಿದೆ.
‘ಅಂಜುಮ್ ಅವರ ವರದಿಯ ವಸ್ತುವಿವನ್ನು ನಾವು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ ಕಾನೂನುಬದ್ಧ ಪತ್ರಿಕೋದ್ಯಮ ಎಂದು ತೋರುವ ಕೃತ್ಯದ ಬಗ್ಗೆ ಎಫ್‌ಐಆರ್ ದಾಖಲಿಸಿರುವುದು ಅತಿಯಾದ ಕ್ರಮ’ ಎಂದು ಗಿಲ್ಡ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.