ADVERTISEMENT

ಕೇರಳ ಕರಾವಳಿಯಲ್ಲಿ ಸಿಂಗಪುರದ ಬೃಹತ್ ಹಡಗಿನಲ್ಲಿ ಬೆಂಕಿ: 22 ಸಿಬ್ಬಂದಿ ರಕ್ಷಣೆ

ಕೊಚ್ಚಿ ಬಳಿ ಕೇರಳ ಕರಾವಳಿಯಲ್ಲಿ ಕಂಟೇನರ್‌ಗಳಿಂದ ತುಂಬಿದ್ದ ಸಿಂಗಪುರ ಮೂಲದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಪಿಟಿಐ
Published 9 ಜೂನ್ 2025, 10:03 IST
Last Updated 9 ಜೂನ್ 2025, 10:03 IST
<div class="paragraphs"><p>ಕೇರಳ ಕರಾವಳಿಯಲ್ಲಿ ಸಿಂಗಪುರದ ಬೃಹತ್ ಹಡಗಿನಲ್ಲಿ ಬೆಂಕಿ</p></div>

ಕೇರಳ ಕರಾವಳಿಯಲ್ಲಿ ಸಿಂಗಪುರದ ಬೃಹತ್ ಹಡಗಿನಲ್ಲಿ ಬೆಂಕಿ

   

ಕೊಚ್ಚಿ: ಕೊಚ್ಚಿ ಬಳಿ ಕೇರಳ ಕರಾವಳಿಯಲ್ಲಿ ಕಂಟೇನರ್‌ಗಳಿಂದ ತುಂಬಿದ್ದ ಸಿಂಗಪುರ ಮೂಲದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಕೂಡಲೇ ಎಚ್ಚೆತ್ತುಕೊಂಡ ಇಂಡಿಯನ್ ಕೋಸ್ಟ್ ಗಾರ್ಡ್, ನೌಕಾಪಡೆಯ ಸಿ144 ಜೆಟ್ ಹಾಗೂ ಅಗ್ನಿಶಾಮಕ ಹಡಗುಗಳ ಮೂಲ ಸ್ಥಳಕ್ಕೆ ದೌಡಾಯಿಸಿ ಹಡಗಿನಲ್ಲಿದ್ದ 22 ಸಿಬ್ಬಂದಿಯನ್ನು ರಕ್ಷಿಸಿದ್ದಾರೆ.

ADVERTISEMENT

ಹಡಗಿನಲ್ಲಿ ಇನ್ನೂ ಬೆಂಕಿ ಇದ್ದು ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರೆದಿದೆ. ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದೆ ಎಂದು ಕೋಸ್ಟ್ ಗಾರ್ಡ್ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಜೂನ್ 7 ರಂದು ಶ್ರೀಲಂಕಾದ ಕೊಲೊಂಬೊದಿಂದ ಹೊರಟಿದ್ದ ಸಿಂಗಪುರದ ಕಂಟೇನರ್ ಹಡಗು ಇಂದು ಕೇರಳ ಕರಾವಳಿ ಪ್ರವೇಶಿಸಿತ್ತು. ಬೆಳಿಗ್ಗೆ 10;30ಕ್ಕೆ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಅವರು ಹೇಳಿದ್ದಾರೆ.

270 ಮೀಟರ್ ಉದ್ದದ MV Wan Hai 503 ಹೆಸರಿನ ಈ ಬೃಹತ್ ಹಡಗು ಮುಂಬೈಗೆ ತೆರಳುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ಕೊಚ್ಚಿಯಲ್ಲಿ ತಂಗಿದ್ದ ಐಎನ್‌ಎಸ್‌ ಸೂರತ್ ಅನ್ನು ಬೆಂಕಿ ನಂದಿಸುವ ಕಾರ್ಯಾಚರಣೆಗೆ ನೇವಿ ವೆಸ್ಟರ್ನ್ ಕಮಾಂಡರ್ ಅವರು ಕಳುಹಿಸಿ ಕೊಟ್ಟಿದ್ದಾರೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.