ADVERTISEMENT

ಥಾಣೆ | ವೇಶ್ಯಾವಾಟಿಕೆ: ಲಾಡ್ಜ್ ಮೇಲೆ ದಾಳಿ– 4 ಮಂದಿ ಬಂಧನ, 3 ಮಹಿಳೆಯರ ರಕ್ಷಣೆ

ಪಿಟಿಐ
Published 24 ಫೆಬ್ರುವರಿ 2024, 4:40 IST
Last Updated 24 ಫೆಬ್ರುವರಿ 2024, 4:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಥಾಣೆ: ನವಿ ಮುಂಬೈನ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮೂವರು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ನೆರುಲ್ ಪ್ರದೇಶದ ಶಿವರಣೆಯಲ್ಲಿರುವ ರಾಜ್‌ ಇನ್ ಲಾಡ್ಜಿಂಗ್ ಆ್ಯಂಡ್ ಬೋರ್ಡಿಂಗ್‌ ಮೇಲೆ ಮಾನವ ಕಳ್ಳ ಸಾಗಣಿಕೆ ತಡೆ ಕೋಶ ದಾಳಿ ನಡೆಸಿದೆ. ಗ್ರಾಹಕರ ಸೋಗಿನಲ್ಲಿ ಒಬ್ಬರನ್ನು ಕಳಿಸಿ ಗುರುವಾರ ಈ ದಾಳಿ ನಡೆಸಲಾಗಿದೆ.

ಮೂವರು ಏಜೆಂಟ್ ಹಾಗೂ ಒಬ್ಬ ಮ್ಯಾನೇಜರ್‌ನನ್ನು ಬಂಧಿಸಲಾಗಿದೆ. ಮೂವರು ಮಹಿಳೆಯರನ್ನು ರಕ್ಷಿಸಿ ಅವರನ್ನು ಆಶ್ರಯ ಕೇಂದ್ರಕ್ಕೆ ಕಳುಹಿಸಲಾಗಿದೆ.

ADVERTISEMENT

‘ವೆಬ್‌ಲಿಂಕ್ ಹಾಗೂ ವಾಟ್ಸ್‌ಆ್ಯಪ್ ಮೂಲಕ ಗ್ರಾಹಕರೊಂದಿಗೆ ಮಾತುಕತೆ ನಡೆಸಿ, ಆಯ್ಕೆಗೆ ಮಹಿಳೆಯರ ಚಿತ್ರಗಳನ್ನು ಕಳುಹಿಸುತ್ತಿದ್ದರು. ಇದೇ ಲಾಡ್ಜ್‌ನಲ್ಲಿ ಕೋಣೆ ಕಾಯ್ದಿರಿಸುವಂತೆ ಗ್ರಾಹಕರಿಗೆ ಹೇಳಿ, ಅಲ್ಲಿಯೇ ಮಹಿಳೆಯರು ಬರುವಂತೆ ಮಾಡಲಾಗುತ್ತಿತ್ತು’ ಎಂದು ಮಾನವ ಕಳ್ಳ ಸಾಗಣೆ ಕೋಶದ ಹಿರಿಯ ಇನ್‌ಸ್ಪೆಕ್ಟರ್‌ ಪೃಥ್ವಿರಾಜ್ ಘೋರ್ಪಡೆ ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆಯ ‘ಮಾನವ ಕಳ್ಳಸಾಗಣಿಕೆ ಹಾಗೂ ಅನೈತಿಕ ಸಾಗಣೆ (ತಡೆ) ಕಾಯ್ದೆ’ಯಡಿ ತುರ್ಭೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಾಡ್ಜ್‌ನ ಮಾಲೀಕನಿಗಾಗಿ ಶೋಧ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.