ADVERTISEMENT

ಅಣ್ಣಾ ಹಜಾರೆ ನಡೆ ನಿರೀಕ್ಷಿತ: ಶಿವಸೇನಾ ಲೇವಡಿ

ಪಿಟಿಐ
Published 30 ಜನವರಿ 2021, 16:04 IST
Last Updated 30 ಜನವರಿ 2021, 16:04 IST
ಅಣ್ಣಾ ಹಜಾರೆ
ಅಣ್ಣಾ ಹಜಾರೆ   

ಮುಂಬೈ: ‘ರೈತರ ವಿಷಯಗಳನ್ನು ಮುಂದಿಟ್ಟುಕೊಂಡು ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿ, ನಂತರ ಅದರಿಂದ ಹಿಂದೆ ಸರಿಯುವುದು ಮಾಮೂಲಿ. ಈ ಬಾರಿಯೂ ಅದು ನಿರೀಕ್ಷೆಯಂತೆಯೇ ಆಗಿದೆ’ ಎಂದು ಶಿವಸೇನಾ ಶನಿವಾರ ಲೇವಡಿ ಮಾಡಿದೆ.

‘ಹಜಾರೆ ಅವರ ಈ ನಡೆ ತಮಾಷೆ ಎನಿಸುತ್ತವೆ. ಆದರೆ, ವಿವಾದಾತ್ಮಕ ಕೃಷಿ ಕಾಯ್ದೆಗಳ ಕುರಿತು ಹಜಾರೆ ಅವರ ನಿಲುವು ಏನು ಎಂಬುದು ಇನ್ನೂ ಅಸ್ಪಷ್ಟ’ ಎಂದು ಪಕ್ಷದ ಮುಖವಾಣಿ ‘ಸಾಮ್ನಾ‘ದ ಸಂಪಾದಕೀಯದಲ್ಲಿ ಹೇಳಲಾಗಿದೆ.

ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ, ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಶುಕ್ರವಾರ ಘೋಷಿಸಿದ್ದರು.

ADVERTISEMENT

ಕೇಂದ್ರದ ಕೃಷಿ ಖಾತೆಯ ರಾಜ್ಯ ಸಚಿವ ಕೈಲಾಶ್‌ ಚೌಧರಿ, ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್‌ ಅವರೊಂದಿಗೆ ಚರ್ಚೆ ನಡೆಸಿದ ನಂತರ ಅವರು ತಮ್ಮ ನಿರ್ಧಾರವನ್ನು ಬದಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.