
ನವದೆಹಲಿ: ರೋಬೊ ನಾಯಿಯನ್ನು ತಮ್ಮದೇ ಎಂದು ಪ್ರದರ್ಶನಕ್ಕೆ ಇಟ್ಟಿದ್ದ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಪ್ರತಿನಿಧಿಗಳು AI Impact Summit ಮೇಳದಿಂದ ಜಾಗ ಖಾಲಿ ಮಾಡಿದ್ದಾರೆ.
ಚೀನಾದಲ್ಲಿ ತಯಾರಿಸಲಾಗಿದ್ದ ರೋಬೊ ನಾಯಿಯನ್ನು ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯವು ತಮ್ಮದೇ ಎಂದು ಹೇಳಿಕೊಂಡಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು, ಎಐ ಎಕ್ಸ್‌ಪೋದಲ್ಲಿ ತೆರೆಯಲಾಗಿದ್ದ ಮಳಿಗೆಯನ್ನು ತೆರವು ಮಾಡುವಂತೆ ವಿವಿಯ ಸಿಬ್ಬಂದಿಗೆ ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ.
'ರೋಬೊ ನಾಯಿ' ವಿಚಾರವು ವಿವಾದಕ್ಕೆ ತಿರುಗುತ್ತಿದ್ದಂತೆ ಗ್ಯಾಲ್ಗೋಟಿಯಾಸ್ ವಿವಿಯ ರಿಜಿಸ್ಟ್ರಾರ್ ನಿತಿನ್ ಕುಮಾರ್ ಗೌರ್ ಅವರು ಮಾಧ್ಯಮಗಳಿಗೆ ಬುಧವಾರ ಸ್ಪಷ್ಟನೆ ನೀಡಿದ್ದಾರೆ.
ನಿರ್ಮಾಣ (Develop) ಹಾಗೂ ಅಭಿವೃದ್ಧಿ (Development) ಪದಗಳ ಬಳಕೆಯಿಂದಾಗಿ ವಿವಾದ ಸೃಷ್ಟಿಯಾಗಿದೆ. ವಿಶ್ವ ವಿದ್ಯಾಲಯವು 'ರೋಬೊ ನಾಯಿ'ಯನ್ನು ನಿರ್ಮಿಸಿಲ್ಲ. ಆದರೆ, ಶೈಕ್ಷಣಿಕ ಮತ್ತು ಸಂಶೋದನಾ ಉದ್ದೇಶಕ್ಕಾಗಿ ಅಭಿವೃದ್ಧಿಯಲ್ಲಿ ಕೆಲಸ ಮಾಡಿದ್ದೇವೆ' ಎಂದು ವಿವರಿಸಿದ್ದಾರೆ.
'ರೋಬೊ ನಾಯಿ'ಯ ಅಭಿವೃದ್ಧಿಯ ಮೇಲೆ ಕೆಲಸ ಮಾಡಿದ್ದೇವೆ. ಅದರಂತೆಯೇ ಇನ್ನಷ್ಟು ರೋಬೊಗಳನ್ನು ತಯಾರಿಸಲು ಬಯಸುತ್ತಿದ್ದೇವೆ. ಅದರಂತೆ ನಮ್ಮ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಗೌರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.