ADVERTISEMENT

Goa Results 2022| ಇದು ಪ್ರಾಮಾಣಿಕ ರಾಜಕಾರಣದ ಆರಂಭ: ಕೇಜ್ರಿವಾಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2022, 9:01 IST
Last Updated 10 ಮಾರ್ಚ್ 2022, 9:01 IST
ಅರವಿಂದ ಕೇಜ್ರಿವಾಲ್‌
ಅರವಿಂದ ಕೇಜ್ರಿವಾಲ್‌    

ಗೋವಾ: ಗೋವಾದಲ್ಲಿ ಪ್ರಮಾಣಿಕ ರಾಜಕಾರಣ ಆರಂಭವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

ಗೋವಾ ವಿಧಾನಸಭೆಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಆಮ್‌ ಆದ್ಮಿ (ಎಎಪಿ) ಖಾತೆ ತೆರೆಯುವಲ್ಲಿ ಈ ಬಾರಿ ಯಶಸ್ವಿಯಾಗಿದೆ.

ಬೆನೌಲಿಮ್‌ನಲ್ಲಿ ಎಎಪಿ ಅಭ್ಯರ್ಥಿ ವೆನ್ಸಿ ವೈಗಸ್‌ ಮತ್ತು ವೇಲಿಮ್‌ ಕ್ಷೇತ್ರದಲ್ಲಿ ಕ್ರುಜ್‌ ಸಿಲ್ವಾ ಎಂಬುವವರು ಗೆಲುವು ಸಾಧಿಸಿದರೆ. ಈ ಇಬ್ಬರೂ ಅಭ್ಯರ್ಥಿಗಳಿಗೆ ಶುಭ ಕೋರಿರುವ ಕೇಜ್ರಿವಾಲ್‌, ಈ ಫಲಿತಾಂಶವು ‘ಗೋವಾದಲ್ಲಿ ಪ್ರಾಮಾಣಿಕ ರಾಜಕಾರಣದ ಅರಂಭ’ ಎಂದು ಕೊಂಡಾಡಿದ್ದಾರೆ.

40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಬಿಜೆಪಿ 19ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಕಾಂಗ್ರೆಸ್‌ 12ರಲ್ಲಿ, ಎಎಪಿ 2ರಲ್ಲಿ ಮತ್ತು ಇತರರು 7ರಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಪಂಜಾಬ್‌ನಲ್ಲಿ ಎಎಪಿ 93 ಕ್ಷೇತ್ರಗಳಲ್ಲಿ ಮುಂದಿದ್ದು, ಭಾರಿ ಬಹುಮತದತ್ತ ಧಾಪುಗಾಲಿಟ್ಟಿದೆ. ಗಡಿ ರಾಜ್ಯದಲ್ಲಿ ಆಪ್‌ ಮೊದಲ ಬಾರಿಗೆ ಸರ್ಕಾರ ರಚಿಸುವುದು ನಿಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.