ಅರವಿಂದ ಕೇಜ್ರಿವಾಲ್
ನವದೆಹಲಿ: ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರ ಮೇಲೆ ಖಾಲಿಸ್ತಾನಿ ಪರ ಗುಂಪು ದಾಳಿ ನಡೆಸುವ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ನೀಡಿದ ವರದಿಗೆ ಪ್ರತಿಕ್ರಿಯಿಸಿದ ಅವರು ‘ದೇವರು ನನ್ನನ್ನು ಕಾಪಾಡುತ್ತಾನೆ’ ಎಂದಿದ್ದಾರೆ.
ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇವರು ಕಾಪಾಡುವವರನ್ನು ಯಾರಿಂದಲೂ ಕೊಲ್ಲಲು ಸಾಧ್ಯವಿಲ್ಲ. ಅವನು (ದೇವರು) ಪ್ರತಿಯೊಬ್ಬರಿಗೂ ನೀಡಿರುವ ಲೈಫ್‌ಲೈನ್ ಇರುವಷ್ಟು ದಿನ ಆಯಾ ಜೀವುಗಳು ಇರಲಿವೆ. ಕರೆ ಬಂದ ಮೇಲೆ ಲೈಫ್‌ಲೈನ್ ಅಂತ್ಯಗೊಳ್ಳುತ್ತದೆ. ದೇವರು ನನ್ನೊಂದಿಗೆ ಇದ್ದಾನೆ’ ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಅವರ ಜೀವಕ್ಕೆ ಆಪತ್ತಿದೆ ಎಂದು ಗುಪ್ತಚರ ಇಲಾಖೆ ಪ್ರಾಥಮಿಕ ಮಾಹಿತಿ ನೀಡಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಕೇಜ್ರಿವಾಲ್ ಅವರು ಝಡ್ ಫ್ಲಸ್ ಭದ್ರತೆಯಲ್ಲಿದ್ದಾರೆ. ಬೆಂಗಾವಲು ಪಡೆ, ಎಸ್ಕಾರ್ಟ್ ತಂಡ, ಶೋಧ ತಂಡ ಸೇರಿ 63 ಮಂದಿ ಸಿಬ್ಬಂದಿ ಕೇಜ್ರಿವಾಲ್ ಅವರಿಗೆ ಭದ್ರತೆ ನೀಡುತ್ತಿದ್ದಾರೆ. ಇದಲ್ಲದೆ ಸಮವಸ್ತ್ರ ಧರಿಸದ 15 ಸಿಎಪಿಎಫ್ ಸಿಬ್ಬಂದಿ ಕೇಜ್ರಿವಾಲ್ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.