ADVERTISEMENT

ಅಗ್ನಿಪಥ ಯೋಜನೆ: ಪ್ರತಿಭಟನೆ ಬೆನ್ನಲ್ಲೇ ನೇಮಕಾತಿ ವಯೋಮಿತಿ ಪರಿಷ್ಕರಿಸಿದ ಕೇಂದ್ರ

ಪಿಟಿಐ
Published 17 ಜೂನ್ 2022, 4:30 IST
Last Updated 17 ಜೂನ್ 2022, 4:30 IST
ಸೇನಾ ನೇಮಕಾತಿ (ಸಾಂದರ್ಭಿಕ ಚಿತ್ರ –ಪಿಟಿಐ)
ಸೇನಾ ನೇಮಕಾತಿ (ಸಾಂದರ್ಭಿಕ ಚಿತ್ರ –ಪಿಟಿಐ)   

ನವದೆಹಲಿ:ಸೈನಿಕರ ನೇಮಕಾತಿಯ ಹೊಸ ನೀತಿ ‘ಅಗ್ನಿಪಥ ಯೋಜನೆ’ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವುದರ ನಡುವೆಯೇ,ಕೇಂದ್ರ ಸರ್ಕಾರವು ನೇಮಕಾತಿ ವಯೋಮಿತಿಯನ್ನು ಪರಿಷ್ಕರಿಸಿದೆ. 2022ರ ಸಾಲಿಗೆ ಅನ್ವಯಿಸಿ ಗರಿಷ್ಠ ವಯೋಮಿತಿಯನ್ನು 21 ವರ್ಷದ ಬದಲು 23 ವರ್ಷಕ್ಕೆ ಹೆಚ್ಚಿಸಿದೆ.

ಅಗ್ನಿಪಥ ಯೋಜನೆಯನ್ನು ಮಂಗಳವಾರ ಪ್ರಕಟಿಸಿದ್ದ ಸರ್ಕಾರ, ಹದಿನೇಳುವರೆ ವರ್ಷದಿಂದ 21ರ ನೇಮಕಾತಿ ವಯೋಮಿತಿಯವರು ನೇಮಕಾತಿಯಲ್ಲಿ ಭಾಗವಹಿಸಬಹುದು ಎಂದು ತಿಳಿಸಿತ್ತು.

ಕಳೆದ 2 ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆಸಲು ಸಾಧ್ಯವಾಗಿಲ್ಲ ಎಂಬ ಅಂಶವನ್ನು ಅರಿತು, ಸದ್ಯದ (ಪ್ರಸ್ತಾವಿತ) ನೇಮಕಾತಿ ವೇಳೆ ಒಂದು ಬಾರಿ ವಿನಾಯಿತಿ ನೀಡಲುಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.