ADVERTISEMENT

ದೇಶದ ಅಭಿವೃದ್ಧಿಯಲ್ಲಿ ಹಿಂದಿ ಪ್ರಮುಖ ಪಾತ್ರ ವಹಿಸಿದೆ: ಲೋಕಸಭಾಧ್ಯಕ್ಷ ಓಂ ಬಿರ್ಲಾ

ಪಿಟಿಐ
Published 16 ಡಿಸೆಂಬರ್ 2024, 4:23 IST
Last Updated 16 ಡಿಸೆಂಬರ್ 2024, 4:23 IST
<div class="paragraphs"><p> ಓಂ ಬಿರ್ಲಾ</p></div>

ಓಂ ಬಿರ್ಲಾ

   

ಪಿಟಿಐ ಚಿತ್ರ

ಇಟಾವಾ (ಉತ್ತರ ಪ್ರದೇಶ): ‘ಹಿಂದಿ ಭಾಷೆಯು ಭಾರತದ ಆತ್ಮ ಮತ್ತು ಹೆಗ್ಗುರುತಾಗಿದ್ದು, ಇತರ ಭಾಷೆಗಳ ಜತೆಗೆ ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಿದೆ’ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.

ADVERTISEMENT

ಇಟಾವಾ ಹಿಂದಿ ಸೇವಾ ನಿಧಿಯ 30ನೇ ವಾರ್ಷಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಹಿಂದಿ ಭಾಷೆಯು ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಒಂದೇ ಎಳೆಯಲ್ಲಿ ಹೆಣೆದು ಅದನ್ನು ಸಶಕ್ತಗೊಳಿಸಿದೆ’ ಎಂದು ಬಣ್ಣಿಸಿದ್ದಾರೆ.

‘ಹಿಂದಿ ಸಂವಹನದ ಸಾಮಾನ್ಯ ಭಾಷೆಯಾಗಿರದೆ ಬದಲಾಗುತ್ತಿರುವ ತಾಂತ್ರಿಕತೆಗೆ ಅನುಗುಣವಾಗಿ ಹೊಂದಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಬಳಕೆಯೊಂದಿಗೆ ಹಿಂದಿ ಸಾಹಿತ್ಯ ಪರಂಪರೆ ಜಗತ್ತಿನಾದ್ಯಂತ ಪಸರಿಸಿದೆ. ಆದೇ ರೀತಿ ನ್ಯಾಯಾಂಗ, ಕಾರ್ಯಾಂಗ ಸೇರಿದಂತೆ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹಿಂದಿಯನ್ನು ಹೆಚ್ಚು ಬಳಸಲಾಗುತ್ತಿದೆ’ ಎಂದು ಹೇಳಿದ್ದಾರೆ.

ದೂರದೃಷ್ಟಿಯುಳ್ಳ ನಾಯಕರು ದೇಶದ ವಿವಿಧ ರಾಜ್ಯಗಳು ಮತ್ತು ವಿವಿಧ ಭಾಷೆಗಳನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನವನ್ನು ರಚನೆ ಮಾಡಿದ್ದಾರೆ. ಭಾಷೆಗಳ ಪ್ರಾಮುಖ್ಯತೆಯನ್ನು ಏಕತೆಯ ಸಂಕೇತವೆಂದು ಗುರುತಿಸಲಾಗಿದ್ದು, ಇಡೀ ರಾಷ್ಟ್ರವನ್ನು ಒಂದುಗೂಡಿಸುವ ಹಿಂದಿ ಭಾಷೆಯ ಅಂತರ್ಗತ ಸಾಮರ್ಥ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಬಿರ್ಲಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.