ಹೈದರಾಬಾದ್ ಮೆಟ್ರೊದಲ್ಲಿ ಜೀವಂತ ಹೃದಯವನ್ನು ಸಾಗಿಸುತ್ತಿರುವ ವೈದ್ಯರು
ಹೈದರಾಬಾದ್: ತುರ್ತು ಚಿಕಿತ್ಸೆಗೆ ಅವಶ್ಯವಿದ್ದ ರೋಗಿಯೊಬ್ಬರ ಅಂಗಾಂಗ ಜೋಡಣೆಗಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ‘ಜೀವಂತ ಹೃದಯ’ವನ್ನು ಸಾಗಿಸಲು ಹೈದರಾಬಾದ್ ಮೆಟ್ರೊ ಸಿಬ್ಬಂದಿ ‘ಗ್ರೀನ್ ಕಾರಿಡಾರ್’ ವ್ಯವಸ್ಥೆ ಕಲ್ಪಿಸಿದ್ದಾರೆ.
ಹೈದರಾಬಾದ್‌ನ ಲಾಲ್ ಬಹದ್ದೂರ್ (ಎಲ್.ಬಿ) ನಗರದ ಕಾಮಿನೇನಿ ಆಸ್ಪತ್ರೆಯಿಂದ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ಹೃದಯವನ್ನು ಸಾಗಿಸಲಾಗಿದೆ. ‘ಗ್ರೀನ್ ಕಾರಿಡಾರ್’ ಮೂಲಕ ಕೇವಲ 13 ನಿಮಿಷಗಳಲ್ಲಿ 13 ಕಿಲೋಮೀಟರ್ ದೂರವನ್ನು ತ್ವರಿತವಾಗಿ ಕ್ರಮಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರೊ ಸಿಬ್ಬಂದಿ ಮತ್ತು ಆಸ್ಪತ್ರೆ ವೈದ್ಯರ ನಡುವಿನ ಸಮನ್ವಯದ ಪರಿಣಾಮವಾಗಿ ಹೃದಯವನ್ನು ಸುರಕ್ಷಿತವಾಗಿ ಮತ್ತು ಸರಿಯಾದ ಸಮಯಕ್ಕೆ ತಲುಪಿಸಲಾಗಿದ್ದು, ತುರ್ತು ಅಗತ್ಯವಿದ್ದವರಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
‘ಗ್ರೀನ್ ಕಾರಿಡಾರ್’ ವ್ಯವಸ್ಥೆ ಕಲ್ಪಿಸುವ ಮೂಲಕ ವೈದ್ಯಕೀಯ ತುರ್ತು ಪರಿಸ್ಥಿತಿಗೆ ನೆರವಾಗುವುದು ಮತ್ತು ಜನರ ಜೀವಗಳನ್ನು ಉಳಿಸುವಲ್ಲಿ ತಂತ್ರಜ್ಞಾನ ಮತ್ತು ಮೂಲಸೌಕರ್ಯ ಪ್ರಮುಖ ಪಾತ್ರವಹಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.