ADVERTISEMENT

ಪೊಲೀಸರು ಬಂಧಿಸಿದಾಗ 'ನಾನು ವಿಕಾಸ್ ದುಬೆ' ಎಂದು ಕಿರುಚಿದ ರೌಡಿಶೀಟರ್‌

ಏಜೆನ್ಸೀಸ್
Published 10 ಜುಲೈ 2020, 10:14 IST
Last Updated 10 ಜುಲೈ 2020, 10:14 IST
ವಿಕಾಸ್  ದುಬೆ
ವಿಕಾಸ್ ದುಬೆ   

ಉಜ್ಜಯನಿ: ಕಾನ್ಪುರ್‌ನಲ್ಲಿಎಂಟು ಮಂದಿ ಪೊಲೀಸರ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್‌ ವಿಕಾಸ್‌ ದುಬೆಯನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದಾಗ, 'ಮೇ ವಿಕಾಸ್ ದುಬೆ ಹೂಂ, ಕಾನ್ಪುರ್‌ವಾಲಾ' (ನಾನು ವಿಕಾಸ್ ದುಬೆ, ಕಾನ್ಪುರದವನು)ಎಂದು ಆತಕಿರುಚಿದ್ದಾನೆ.ಆಗಪೊಲೀಸ್ ಸಿಬ್ಬಂದಿಯೊಬ್ಬರು,ಆವಾಜ್ ನಹೀ (ಸುಮ್ಮನಿರು) ಎಂದು ಏಟು ಕೊಟ್ಟಿದ್ದಾರೆ.

ಕುಖ್ಯಾತ ರೌಡಿ, ಹತ್ಯೆ ಪ್ರಕರಣ ಸೇರಿದಂತೆ 60 ಪ್ರಕರಣಗಳ ಆರೋಪಿಯಾಗಿರುವ ದುಬೆಯನ್ನು ಗುರುವಾರ ಬೆಳಗ್ಗೆ ಉಜ್ಜಯನಿ ದೇವಾಲಯವೊಂದರಲ್ಲಿಬಂಧಿಸಲಾಗಿದೆ.

ಮಂಗಳವಾರ ರಾತ್ರಿ ಫರೀದಾಬಾದ್‌ನ ಹೋಟೆಲ್‌ಗೆ ಬಂದಿದ್ದ ದುಬೆ, ತನಗಾಗಿ ಒಂದು ಕೊಠಡಿ ಬುಕ್‌ ಮಾಡಲು ಮುಂದಾಗಿದ್ದ. ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿತ್ತು ಮತ್ತು ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಆದರೆ ಪೊಲೀಸರು ಅಲ್ಲಿಗೆ ತಲುಪುವ ಮೊದಲೇ ಆತ ಪರಾರಿಯಾಗಿದ್ದ’ ಎಂದು ಅಧಿಕಾರಿಗಳು ಹೇಳಿದ್ದರು.

ADVERTISEMENT

ಇನ್ನೊಂದೆಡೆ, ಉತ್ತರಪ್ರದೇಶ ಎಸ್‌ಟಿಎಫ್‌ ಹಾಗೂ ಕ್ರೈಂ ಬ್ರಾಂಚ್‌ ಪೊಲೀಸರು ಫರೀದಾಬಾದ್‌ನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ, ವಿಕಾಸ್‌ ದುಬೆಯ ಸಮೀಪವರ್ತಿಗಳೆನಿಸಿಕೊಂಡಿದ್ದಅಂಕುರ್‌, ಶ್ರವಣ್‌ ಹಾಗೂ ಕಾರ್ತಿಕೇಯ ಅಲಿಯಾಸ್‌ ಪ್ರಭಾತ್‌ ಎಂಬುವರನ್ನು ಬಂಧಿಸಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.