ADVERTISEMENT

ಯಾರೂ ನನ್ನ ಹಾದಿಯಲ್ಲಿ ನಡೆಯಬೇಡಿ: ಲಾಲು ಪುತ್ರಿ ರೋಹಿಣಿ ಹೀಗೆ ಹೇಳಿದ್ದು ಯಾಕೆ?

ಏಜೆನ್ಸೀಸ್
Published 16 ನವೆಂಬರ್ 2025, 8:23 IST
Last Updated 16 ನವೆಂಬರ್ 2025, 8:23 IST
<div class="paragraphs"><p>ಲಾಲು ಪ್ರಸಾದ್‌&nbsp; ಜೊತೆಗೆ ರೋಹಿಣಿ ಆಚಾರ್ಯ –ಪಿಟಿಐ ಚಿತ್ರ</p></div>

ಲಾಲು ಪ್ರಸಾದ್‌  ಜೊತೆಗೆ ರೋಹಿಣಿ ಆಚಾರ್ಯ –ಪಿಟಿಐ ಚಿತ್ರ

   

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಹೀನಾಯ ಸೋಲುಂಡ ಬೆನ್ನಲ್ಲೇ, ಲಾಲು ಪ್ರಸಾದ್‌ ಕುಟುಂಬ ಮತ್ತೊಂದು ಆಘಾತ ಎದುರಿಸಿದೆ.

‘ನಾನು ರಾಜಕೀಯವನ್ನು ತೊರೆಯುತ್ತಿದ್ದೇನೆ ಮತ್ತು ಕುಟುಂಬವನ್ನು ತ್ಯಜಿಸುತ್ತಿದ್ದೇನೆ ಎಂದು ಘೋಷಣೆ ಮಾಡಿದ ಮರುದಿನವೇ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ಕುಟುಂಬದ ಸದಸ್ಯರಿಂದ ಅವಮಾನ, ನಿಂದನೆ ಮತ್ತು ಬೆದರಿಕೆ ಹಾಕಲಾಗಿದೆ’ ಎಂದು ಆರೋಪಿಸಿದ್ದಾರೆ.

ADVERTISEMENT

‘ನಾನು ನನ್ನ ತಂದೆಗೆ ಮೂತ್ರಪಿಂಡವನ್ನು ನೀಡುವುದಕ್ಕೆ ಕೋಟ್ಯಂತರ ರೂಪಾಯಿ ಹಣ ತೆಗೆದುಕೊಂಡಿದ್ದೇನೆ ಎಂದು ಆರೋಪಿಸಿ ನನ್ನನ್ನು ಕೊಳಕು ಎಂದು ನಿಂದಿಸಲಾಗಿದೆ. ಮದುವೆಯಾದ ಎಲ್ಲಾ ಹೆಣ್ಣುಮಕ್ಕಳು ಮತ್ತು ಸಹೋದರಿಯರಿಗೆ ನಾನು ಒಂದು ಮಾತನ್ನು ಹೇಳಲು ಬಯಸುತ್ತೇನೆ... ನಿಮ್ಮ ಕುಟುಂಬವನ್ನು ನೋಡಿಕೊಳ್ಳಿ, ನಿಮ್ಮ ಮಕ್ಕಳು, ನಿಮ್ಮ ಅತ್ತೆ-ಮಾವಂದಿರನ್ನು ನೋಡಿಕೊಳ್ಳಿ, ನಿಮ್ಮ ಹೆತ್ತವರ ಬಗ್ಗೆ ಚಿಂತಿಸದೆ, ನಿಮ್ಮ ಬಗ್ಗೆ ಯೋಚಿಸಿ. ನನ್ನ ಕುಟುಂಬ, ನನ್ನ ಮೂವರು ಮಕ್ಕಳು, ಮೂತ್ರಪಿಂಡ ನೀಡುವಾಗ ನನ್ನ ಗಂಡ ಅಥವಾ ನನ್ನ ಅತ್ತೆ-ಮಾವನ ಅನುಮತಿ ಪಡೆಯದೆ ನಾನು ದೊಡ್ಡ ತಪ್ಪು ಮಾಡಿದ್ದೇನೆ. ನೀವೆಲ್ಲರೂ ನನ್ನಂತೆ ತಪ್ಪು ಮಾಡಿಬೇಡಿ, ನನ್ನಂತಹ (ರೋಹಿಣಿ) ಹೆಣ್ಣು ಮಗಳು ಯಾವುದೇ ಮನೆಯಲ್ಲಿ ಇರಬಾರದು’ ಎಂದು ರೋಹಿಣಿ ಆಚಾರ್ಯ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಒಬ್ಬ ಮಗಳಾಗಿ, ಸಹೋದರಿಯಾಗಿ, ವಿವಾಹಿತ ಮಹಿಳೆಯಾಗಿರುವ ನನ್ನನ್ನು ಅವಮಾನಿಸಲಾಯಿತು. ಕೊಳಕು ಎಂಬಂತೆ ನಿಂದಿಸಲಾಯಿತು. ಚಪ್ಪಲಿಯಿಂದ ಹೊಡೆಯುವ ಯತ್ನಿಸಲಾಯಿತು. ನಾನು ನನ್ನ ಆತ್ಮಗೌರವವನ್ನು ರಾಜಿ ಮಾಡಿಕೊಳ್ಳಲಿಲ್ಲ. ಸತ್ಯವನ್ನು ಬಿಟ್ಟುಕೊಡಲಿಲ್ಲ. ಇದರಿಂದಾಗಿ ನಾನು ಅವಮಾನ ಅನುಭವಿಸಬೇಕಾಯಿತು. ಒಬ್ಬ ಹೆಣ್ಣು ಮಗಳು ಹೆತ್ತವರನ್ನು ಬಿಟ್ಟು ಹೋಗಬೇಕಾಯಿತು. ನೀವೆಲ್ಲರೂ ನನ್ನ ದಾರಿಯಲ್ಲಿ ನಡೆಯಬಾರದು. ಯಾವುದೇ ಮನೆಯಲ್ಲಿ ರೋಹಿಣಿಯಂತಹ ಮಗಳು-ಸಹೋದರಿ ಇರಬಾರದು’ ಎಂದು ರೋಹಿಣಿ ಆಚಾರ್ಯ ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.