ADVERTISEMENT

ಪಾಕ್‌ಗೆ ಬೆಂಬಲ ನೀಡಿದ್ದಕ್ಕೆ ಪ್ರತೀಕಾರ: ಟರ್ಕಿ ಜತೆ ಒಪ್ಪಂದ ರದ್ದುಪಡಿಸಿದ IIT

ಪಿಟಿಐ
Published 18 ಮೇ 2025, 4:59 IST
Last Updated 18 ಮೇ 2025, 4:59 IST
<div class="paragraphs"><p>ಐಐಟಿ –ಬಾಂಬೆ</p></div>

ಐಐಟಿ –ಬಾಂಬೆ

   

Credit: IANS Photo

ಮುಂಬೈ: ಬಾಂಬೆ ಹಾಗೂ ರೂರ್ಕಿಯ ಐಐಟಿ, ಟರ್ಕಿ ಜೊತೆಗಿನ ತಮ್ಮ ಶೈಕ್ಷಣಿಕ ಒಪ್ಪಂದವನ್ನು ಅಮಾನತುಗೊಳಿಸಿವೆ.

ADVERTISEMENT

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಐಐಟಿ–ಬಾಂಬೆ, ‘ಪ್ರಸ್ತುತ ರಾಜಕೀಯ ಪರಿಸ್ಥಿತಿಯಿಂದಾಗಿ ಐಐಟಿ –ಬಾಂಬೆಯು ಟರ್ಕಿ ವಿಶ್ವವಿದ್ಯಾಲಯಗಳೊಂದಿಗಿನ ತನ್ನ ಒಪ್ಪಂದಗಳನ್ನು ಮುಂದಿನ ಆದೇಶದವರೆಗೆ ರದ್ದುಪಡಿಸಿರುತ್ತದೆ’ ಎಂದು ಹೇಳಿದೆ.

‘ತನ್ನ ಶೈಕ್ಷಣಿಕ ಆದ್ಯತೆಗಳನ್ನು ಪಾಲಿಸುವ ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ಎತ್ತಿಹಿಡಿಯುವ ಜಾಗತಿಕ ಸಹಯೋಗಗಳೊಂದಿಗೆ ಕೈಜೋಡಿಸಲು ಸಂಸ್ಥೆ ಬದ್ಧವಾಗಿದೆ’ ಎಂದು ಐಐಟಿ ತಿಳಿಸಿದೆ.

ಐಐಟಿ ಬಾಂಬೆಯು ಪ್ರಸ್ತುತ ಕೆಲವು ಟರ್ಕಿ ಸಂಸ್ಥೆಗಳೊಂದಿಗೆ ಉಪನ್ಯಾಸಕ ವಿನಿಮಯ ಕಾರ್ಯಕ್ರಮವನ್ನು ಹೊಂದಿದೆ.

ಇನ್ನು, ‘ಶೈಕ್ಷಣಿಕ ಆದ್ಯತೆ ಪ್ರತಿಬಿಂಬಿಸುವ, ರಾಷ್ಟ್ರೀಯ ಹಿತಾಸಕ್ತಿ ಎತ್ತಿಹಿಡಿಯುವ ಜಾಗತಿಕ ಸಹಯೋಗ ಬೆಳೆಸಲು ಸಂಸ್ಥೆ ಬದ್ಧವಾಗಿದೆ’ ಎಂದು ರೂರ್ಕಿ ಐಐಟಿ ‘ಎಕ್ಸ್‌’ನಲ್ಲಿ ಉಲ್ಲೇಖಿಸಿದೆ.

ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದಕ್ಕಾಗಿ ಚಂಡೀಗಢ ವಿಶ್ವವಿದ್ಯಾಲಯದಂತಹ ಖಾಸಗಿ ಸಂಸ್ಥೆಗಳು 23 ಟರ್ಕಿ ಮತ್ತು ಅಜರ್‌ಬೈಜಾನ್‌ ವಿಶ್ವವಿದ್ಯಾಲಯಗಳೊಂದಿಗೆ ತಮ್ಮ ಶೈಕ್ಷಣಿಕ ಸಹಯೋಗವನ್ನು ಕಡಿದುಕೊಂಡಿವೆ.

‘ಆಪರೇಷನ್‌ ಸಿಂಧೂರ’ ಹೆಸರಿನಲ್ಲಿ ಭಾರತವು ಸೇನಾ ಕಾರ್ಯಾಚರಣೆ ನಡೆಸಿದ ವೇಳೆ ಪಾಕಿಸ್ತಾನ ಪರ ಟರ್ಕಿ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಪ್ರತಿಯಾಗಿ ಭಾರತದ ಉದ್ಯಮಿಗಳು ಟರ್ಕಿ ಉತ್ಪನ್ನಗಳಿಗೆ ಬಹಿಷ್ಕಾರ ಹಾಕಲು ತೀರ್ಮಾನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.