ADVERTISEMENT

ಇಂಡಿಯಾ, ಭಾರತ್, ಹಿಂದೂಸ್ಥಾನ್... ಇಷ್ಟವಾದ ಹೆಸರಿನಲ್ಲಿ ಕರೆಯಿರಿ: ಜನತೆಗೆ ಒಮರ್

ಪಿಟಿಐ
Published 11 ಮಾರ್ಚ್ 2025, 11:37 IST
Last Updated 11 ಮಾರ್ಚ್ 2025, 11:37 IST
<div class="paragraphs"><p>ಒಮರ್‌ ಅಬ್ದುಲ್ಲಾ</p></div>

ಒಮರ್‌ ಅಬ್ದುಲ್ಲಾ

   

ಪಿಟಿಐ ಚಿತ್ರ

ಜಮ್ಮು: ನಮ್ಮ ದೇಶಕ್ಕೆ ಭಾರತ್, ಇಂಡಿಯಾ ಮತ್ತು ಹಿಂದೂಸ್ಥಾನ್ ಎನ್ನುವ ಮೂರು ಹೆಸರುಗಳಿವೆ, ಯಾವುದು ಇಷ್ಟವೋ ಆ ಹೆಸರಿನಿಂದ ಕರೆಯಿರಿ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಜನತೆಗೆ ಹೇಳಿದ್ದಾರೆ.

ADVERTISEMENT

ದೇಶದ ಹೆಸರು ಭಾರತ್ ಎಂದಾದರೆ, ಅದನ್ನು ಪ್ರತ್ಯೇಕವಾಗಿ ಹಾಗೆ ಕರೆಯಬೇಕು ಎಂದು ಆರ್‌ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಒಂದು ಸಮಾರಂಭವೊಂದರಲ್ಲಿ ನೀಡಿದ್ದ ಹೇಳಿಕೆಯ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತಾ, ‘ನಾವು ಭಾರತ್, ಇಂಡಿಯಾ, ಹಿಂದೂಸ್ಥಾನ್ ಎಂದು ಕರೆಯುತ್ತೇವೆ. ಯಾವ ಹೆಸರು ಸೂಕ್ತ ಎನಿಸುವುದೋ ಆ ಹೆಸರಿನಲ್ಲಿ ಕರೆಯಿರಿ’ ಎಂದು ಒಮರ್ ಹೇಳಿದ್ದಾರೆ.

ವಿಧಾನಸಭೆಯ ಹೊರಗೆ ವರದಿಗಾರರೊಂದಿಗೆ ಮಾತನಾಡಿದ ಅವರು, ‘ಭಾರತದ ಸಂವಿಧಾನವಿದೆ, ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾವಿದೆ, ಇವೆಲ್ಲ ಯಾಕಿದೆ? ದೇಶದ ಹೆಸರು ಭಾರತ್ ಎಂದಾದರೆ ಹಾಗೆಯೇ ಹೆಸರಿಡಬೇಕಿತ್ತಲ್ಲವೇ’ ಎಂದು ಪ್ರಶ್ನಿಸಿದರು. 

‘ಪ್ರಧಾನ ಮಂತ್ರಿಗಳ ವಿಮಾನದ ಮೇಲೆ ಭಾರತ್ ಮತ್ತು ಇಂಡಿಯಾ ಎಂದು ಎರಡು ಹೆಸರುಗಳಲ್ಲೂ ಬರೆಯಲಾಗಿದೆ. ಇನ್ನೊಂದೆಡೆ ಇಂಡಿಯನ್‌ ಏರ್‌ ಫೋರ್ಸ್‌ ಮತ್ತು ಇಂಡಿಯನ್ ಆರ್ಮಿ ಎಂದು ಕರೆಯುತ್ತೇವೆ. ಅದನ್ನೂ ನಾವು ಭಾರತದ್ದು ಎನ್ನುವ ದೃಷ್ಟಿಕೋನದಲ್ಲಿ ನೋಡುತ್ತೇವೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.