ನವದೆಹಲಿ: ಲಡಾಕ್‌ನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಭಾರತೀಯ ಯೋಧರನ್ನು ಚೀನಾ ಸೇನೆ ವಶಕ್ಕೆ ಪಡೆದಿತ್ತು ಎಂಬ ವರದಿಗಳನ್ನು ಸೇನೆ ತಳ್ಳಿ ಹಾಕಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಸೇನಾ ವಕ್ತಾರ ಕರ್ನಲ್ ಅಮನ್ ಆನಂದ್, ‘ಚೀನಾ ಗಡಿಯಲ್ಲಿ ಭಾರತೀಯ ಯೋಧರನ್ನು ವಶಕ್ಕೆ ಪಡೆಯಲಾಗಿಲ್ಲ. ನಾವಿದನ್ನು ಅಲ್ಲಗಳೆಯುತ್ತಿದ್ದೇವೆ. ಮಾಧ್ಯಮಗಳು ಆಧಾರವಿಲ್ಲದ ಇಂತಹ ವರದಿಗಳನ್ನು ಪ್ರಕಟಿಸುವುದು ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುವಂತಹದ್ದು’ ಎಂದು ಹೇಳಿದ್ದಾರೆ.
ಭಾರತೀಯ ಯೋಧರನ್ನು ಕಳೆದ ವಾರ ವಶಕ್ಕೆ ಪಡೆದಿದ್ದ ಚೀನಾ ಬಳಿಕ ಬಿಡುಗಡೆ ಮಾಡಿತ್ತು ಎಂದು ರಾಷ್ಟ್ರ ಮಟ್ಟದ ಕೆಲವು ಸುದ್ದಿ ವಾಹಿನಿಗಳು ಭಾನುವಾರ ವರದಿ ಮಾಡಿದ್ದವು. ಇದರ ಬೆನ್ನಲ್ಲೇ ಭಾರತೀಯ ಸೇನೆ ಸ್ಪಷ್ಟನೆ ನೀಡಿದೆ.
ಲಡಾಕ್, ಸಿಕ್ಕಿಂ ಸೇರಿದಂತೆ ಹಲವೆಡೆ ಗಡಿ ಪ್ರದೇಶಗಳಲ್ಲಿ ಇತ್ತೀಚೆಗೆ ಭಾರತ–ಚೀನಾ ಸೇನೆಗಳು ಮುಖಾಮುಖಿಯಾಗಿವೆ. ಸಣ್ಣ ಪ್ರಮಾಣದ ಸಂಘರ್ಷಗಳೂ ನಡೆದಿವೆ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.