
ದೇಶದ ಜಲಗಡಿ ರಕ್ಷಿಸುವುದು ನೌಕಾ ಪಡೆಯ ಪ್ರಮುಖ ಉದ್ದೇಶ. ಅದರಲ್ಲಿಯೂ ಭಾರತದಂತಹ ಪರ್ಯಾಯ ದ್ವೀಪದಲ್ಲಿ ಬಲಿಷ್ಟವಾದ ವಾಯು ಪಡೆ ಹೊಂದಿರುವುದು ಬಹಳ ಮುಖ್ಯ. ಭಾರತೀಯ ನೌಕಪಡೆಯ ಸಾಹಸ ಶೌರ್ಯಗಳನ್ನು ನೆನೆಯುವ ಉದ್ದೇಶದಿಂದ ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 4ರಂದು ಭಾರತೀಯ ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ.
ಭಾರತೀಯ ನೌಕಾಪಡೆ ವಿಶ್ವದ ಬಲಿಷ್ಟ ನೌಕಾಪಡೆಗಳ ಪೈಕಿ ಒಂದಾಗಿದೆ. ಭಾರತ ಸ್ವಾತಂತ್ರ್ಯಗೊಂಡ ನಂತರ ಹಲವು ಕಾರ್ಯಾಚರಣೆಗಳಲ್ಲಿ ಭಾರತೀಯ ನೌಕಾಪಡೆ ತನ್ನ ಸಾಮರ್ಥ್ಯ ಸಾಬೀತು ಮಾಡಿದೆ. ದೇಶದ ಕರಾವಳಿ ಗಡಿಯ ರಕ್ಷಣೆ, ವ್ಯಾಪಾರ ಸಂಪರ್ಕ, ಕಡಲಗಳ್ಳರಿಂದ ರಫ್ತು, ಆಮದು ಸರುಕುಗಳ ರಕ್ಷಣೆ, ಅಗತ್ಯ ಬಂದಾಗ ದೇಶದ ರಕ್ಷಣೆಗೆ ಸಿದ್ದವಾಗುತ್ತದೆ.
ಡಿಸೆಂಬರ್ 4 ರಂದು ನೌಕಾಪಡೆ ದಿನ ಯಾಕೆ ಆಚರಿಸಲಾಗುತ್ತದೆ?
1971ರ ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಭಾರತೀಯ ನೌಕಾಪಡೆ ಮಹತ್ವದ ಪಾತ್ರ ವಹಿಸಿತ್ತು. ಡಿಸೆಂಬರ್ 3ರಂದು ಪಾಕಿಸ್ತಾನ ಭಾರತೀಯ ವಾಯುನೆಲೆಯ ಮೇಲೆ ದಾಳಿ ಮಾಡಿದಾಗ ನಮ್ಮ ನೌಕಾಪಡೆಯು ‘ಆಪರೇಷನ್ ಟ್ರೈಡೆಂಟ್’ ಎಂಬ ಹೆಸರಿನ ಕಾರ್ಯಾಚರಣೆ ಮಾಡಿತ್ತು. ಡಿಸೆಂಬರ್ 4 ಹಾಗೂ 5ರ ರಾತ್ರಿ ಪ್ರತಿದಾಳಿ ನಡೆಸಿದ ಭಾರತ ಕರಾಚಿ ಬಂದರನ್ನು ಧ್ವಂಸಗೊಳಿಸಿತು. ಇದರ ನೆನಪಿಗಾಗಿ ಡಿಸೆಂಬರ್ 4ನ್ನು ಭಾರತೀಯ ನೌಕಾಪಡೆಯ ದಿನವೆಂದು ಆಚರಿಸಲಾಗುತ್ತದೆ.
ಈ ಕಾರ್ಯಾಚರಣೆಗೆಂದು ನಿಯೋಜನೆಗೊಂಡಿದ್ದ ಐಎನ್‌ಎಸ್ ನಿಪತ್, ಐಎನ್‌ಎಸ್ ನಿರ್ಘಾಟ್ ಮತ್ತು ಐಎನ್‌ಎಸ್ ವೀರ್ ಯುದ್ದನೌಕೆಗಳು ಕರಾಚಿ ಬಂದರಿನ ಮೇಲೆ ರಾತ್ರೋ ರಾತ್ರಿ ದಾಳಿ ಮಾಡಿದ್ದವು. ಬಂದರಿನಲ್ಲಿದ್ದ ತೈಲ ಟ್ಯಾಂಕರ್‌ಗಳ ಮೇಲೆ ಕ್ಷೀಪಣಿಗಳನ್ನು ಹಾರಿಸಿ ಇಡೀ ಬಂದರನ್ನು ಹೊತ್ತಿ ಉರಿಸಿದವು. ದಾಳಿ ಎದುರಿಸಲು ಬಂದ ಪಾಕಿಸ್ತಾನದ ಯುದ್ದನೌಕೆ ಪಿಎನ್ಎಸ್ ಖೈಬರ್ ಸೇರಿದಂತೆ ಇತರ ಯುದ್ದನೌಕೆಗಳು ಸಮುದ್ರದಲ್ಲಿ ಮುಳುಗಿ ಹೋದವು. ಈ ಮೂಲಕ ಯಶಸ್ವಿ ಕಾರ್ಯಾಚರಣೆ ಮುಗಿಸಿ ನೌಕೆಗಳು ಹಿಂತಿರುಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.