ADVERTISEMENT

ಹೋಳಿ ಹಬ್ಬ: 350 ವಿಶೇಷ ರೈಲು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 19:31 IST
Last Updated 5 ಮಾರ್ಚ್ 2023, 19:31 IST
.
.   

ನವದೆಹಲಿ: ಹೋಳಿ ಹಬ್ಬದ ಸಮಯದಲ್ಲಿ ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ಪೂರೈಸಲು ಭಾರತೀಯ ರೈಲ್ವೆ ಸುಮಾರು 350 ವಿಶೇಷ ರೈಲು ಸೇವೆಯನ್ನು ನಿಯೋಜಿಸಿದೆ.

ಅಂಕಿಅಂಶ ಪ್ರಕಾರ, ಮುಂಬೈ, ಪುಣೆ, ಚೆನ್ನೈ, ಬೆಂಗಳೂರು, ಹೈದರಾಬಾದ್‌ನಿಂದ ಬಿಹಾರ, ಉತ್ತರ ಪ್ರದೇಶ, ಒಡಿಶಾ ಮತ್ತು ಬಂಗಾಳ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದ ರಾಜ್ಯಗಳಿಗೆ ಪ್ರಯಾಣಿಸುವ ಜನರಿಗೆ ಹೆಚ್ಚಿನ ಸಂಖ್ಯೆಯ ರೈಲುಗಳ ಸೇವೆ ಒದಗಿಸಲಾಗುತ್ತದೆ.

ಬೇಡಿಕೆಗೆ ಅನುಗುಣವಾಗಿ ಪ್ರತಿವರ್ಷ ಹೋಳಿ ವಿಶೇಷ ರೈಲುಗಳು ಸಂಚರಿಸುತ್ತವೆ.

ADVERTISEMENT

84 ಹೋಳಿ ವಿಶೇಷ ರೈಲುಗಳೊಂದಿಗೆ ಕೇಂದ್ರ ರೈಲ್ವೆ ಮತ್ತು 68 ವಿಶೇಷ ರೈಲುಗಳೊಂದಿಗೆ ಪಶ್ಚಿಮ ರೈಲ್ವೆ ಗರಿಷ್ಠ ಸಂಖ್ಯೆಯ ರೈಲುಗಳನ್ನು ಪ್ರಾರಂಭಿಸುತ್ತಿದೆ.

ಉತ್ತರ ರೈಲ್ವೆ 66 ರೈಲುಗಳನ್ನು ಹೋಳಿ ವಿಶೇಷ ರೈಲುಗಳಾಗಿ ಸೇವೆಗೆ ನಿಯೋಜಿಸಿದೆ. ಪೂರ್ವ ಮಧ್ಯ ರೈಲ್ವೆ ಮತ್ತು ವಾಯುವ್ಯ ರೈಲ್ವೆ ಕ್ರಮವಾಗಿ 58 ಮತ್ತು 38 ರೈಲುಗಳು ಸಂಚರಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.