ADVERTISEMENT

Operation Sindoor|ಭಾರತದ ‘ಆಕಾಶತೀರ’ ವಾಯು ರಕ್ಷಣಾ ವ್ಯವಸ್ಥೆಗೆ ಹೆಚ್ಚು ಬೇಡಿಕೆ

ಪಿಟಿಐ
Published 23 ಮೇ 2025, 8:01 IST
Last Updated 23 ಮೇ 2025, 8:01 IST
<div class="paragraphs"><p>ಆಕಾಶತೀರ ಎಂಬ ಎಐ ಆಧಾರಿತ ರಕ್ಷಣಾ ವ್ಯವಸ್ಥೆಯಿಂದಾಗಿ ಶತ್ರುಗಳ ಕ್ಷಿಪಣಿ, ಡ್ರೋನ್ ಹೊಡೆದುರುಳಿಸಲು ಸಾಧ್ಯವಾಗಿದೆ.</p></div>

ಆಕಾಶತೀರ ಎಂಬ ಎಐ ಆಧಾರಿತ ರಕ್ಷಣಾ ವ್ಯವಸ್ಥೆಯಿಂದಾಗಿ ಶತ್ರುಗಳ ಕ್ಷಿಪಣಿ, ಡ್ರೋನ್ ಹೊಡೆದುರುಳಿಸಲು ಸಾಧ್ಯವಾಗಿದೆ.

   

-ಪಿಟಿಐ ಚಿತ್ರ

ನಾಗ್ಪುರ: ಪಾಕಿಸ್ತಾನದ ವಿರುದ್ಧ ಭಾರತೀಯ ಸೇನಾಪಡೆ ನಡೆಸಿದ ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ಸಂದರ್ಭದಲ್ಲಿ ಭಾರತದ ಸ್ವದೇಶಿ ನಿರ್ಮಿತ ‘ಆಕಾಶತೀರ’ ವಾಯು ರಕ್ಷಣಾ ವ್ಯವಸ್ಥೆಯು ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ (ಡಿಆರ್‌ಡಿಒ) ಹಾಗೂ ರಕ್ಷಣಾ ಇಲಾಖೆ ಕಾರ್ಯದರ್ಶಿ ಡಾ.ಸಮೀರ್ ವಿ.ಕಾಮತ್‌ ತಿಳಿಸಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಖಂಡಿತವಾಗಿಯೂ ನಮ್ಮ ವಾಯು ರಕ್ಷಣಾ ವ್ಯವಸ್ಥೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ. ಜತೆಗೆ, ಜಾಗತಿಕ ಮಟ್ಟದಲ್ಲಿ ಭಾರತದ ಡ್ರೋನ್‌, ಕ್ಷಿಪಣಿ, ರಾಕೆಟ್‌ಗಳು ಸೇರಿದಂತೆ ವಾಯು ರಕ್ಷಣಾ ವ್ಯವಸ್ಥೆಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಕಾಮತ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ಯಶಸ್ಸಿನ ಬೆನ್ನಲ್ಲೇ ‘ಆಕಾಶತೀರ’ ವಾಯು ರಕ್ಷಣಾ ವ್ಯವಸ್ಥೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ ಎಂದು ಕಾಮತ್‌ ಹೇಳಿದ್ದಾರೆ.

ಈಚೆಗೆ ಪಾಕಿಸ್ತಾನವು ಡ್ರೋನ್‌ ಹಾಗೂ ಕ್ಷಿಪಣಿಗಳಿಂದ ನಡೆಸಿದ ದಾಳಿಯನ್ನು ಹಿಮ್ಮೆಟ್ಟಿಸುವುದಕ್ಕಾಗಿ ಭಾರತೀಯ ಪಡೆಗಳು ಅತ್ಯಾಧುನಿಕ ಎಸ್‌–400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ, ಬರಾಕ್–8 ಹಾಗೂ ಆಕಾಶ್ ಕ್ಷಿಪಣಿಗಳನ್ನು ಬಳಸಿದ್ದವು.

ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತ್ಯುತ್ತರ ನೀಡಲು ಭಾರತವು ಮೇ 7ರಂದು ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ಆರಂಭಿಸಿತ್ತು. ಪಾಕಿಸ್ತಾನ ಪಡೆಗಳು ಭಾರತದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿಗಳಿಂದ ದಾಳಿ ನಡೆಸುವ ಮೂಲಕ ಉದ್ವಿಗ್ನತೆ ಸೃಷ್ಟಿಗೆ ಯತ್ನಿಸಿದವು. ಆದರೆ, ಅತ್ಯಾಧುನಿಕ ‘ಆಕಾಶತೀರ’ ಕ್ಷಿಪಣಿ ವ್ಯವಸ್ಥೆಗಳನ್ನು ಬಳಸುವ ಮೂಲಕ ಭಾರತವು ಶತ್ರು ಪಾಳಯದ ದಾಳಿಯನ್ನು ಸಮರ್ಥವಾಗಿ ತಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.