
ಹೈದರಾಬಾದ್‌ನಲ್ಲಿ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ‘ಇಂದಿರಮ್ಮ ಸೀರೆ ಯೋಜನೆ’ಗೆ ಬುಧವಾರ ಚಾಲನೆ ನೀಡಿದರು
–ಪಿಟಿಐ ಚಿತ್ರ
ಹೈದರಾಬಾದ್: ಅರ್ಹ ಒಂದು ಕೋಟಿ ಮಹಿಳೆಯರಿಗೆ ಸೀರೆ ಹಂಚುವ ‘ಇಂದಿರಮ್ಮ ಸೀರೆ ವಿತರಣೆ ಯೋಜನೆ’ಯನ್ನು ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜಯಂತಿ ದಿನದಂದು ಘೋಷಣೆ ಮಾಡಿದರು.
ಎರಡು ಹಂತಗಳಲ್ಲಿ ಸೀರೆ ಹಂಚಿಕೆ ನಡೆಯಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಅರ್ಹ ಮಹಿಳೆಯರಿಗೆ ಡಿ.9ರ ಒಳಗೆ ಸೀರೆ ಹಂಚಲಾಗುತ್ತದೆ. ಎರಡನೇ ಹಂತದಲ್ಲಿ ನಗರ ಪ್ರದೇಶಗಳಲ್ಲಿ ಇರುವ ಅರ್ಹ ಮಹಿಳೆಯರಿಗೆ ಸೀರೆ ಹಂಚಲಾಗುತ್ತದೆ. ಈ ಹಂತವನ್ನು ಅಂತರರಾಷ್ಟ್ರೀಯ ಮಹಿಳಾ ದಿನದಂದು (ಮಾ.1) ಪೂರ್ಣಗೊಳಿಸಲಾಗುತ್ತದೆ.
ಮಾಜಿ ಇಂದಿರಾ ಗಾಂಧಿ ಅವರ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಾತನಾಡಿ, ‘ಸೀರೆ ನೇಯ್ಗೆಗೆ ಸಮಯ ಬೇಕಾಗುವುದರಿಂದ ಎರಡು ಹಂತಗಳಲ್ಲಿ ವಿತರಣೆ ನಡೆಸಲಾಗುವುದು. ಸಚಿವೆಯರು, ಶಾಸಕಿಯರು ಇಂದಿರಮ್ಮ ಸೀರೆಗಳನ್ನು ಉಡುವುದರ ಮೂಲಕ ಈ ಸೀರೆಗಳಿಗೆ ರಾಯಭಾರಿಗಳಾಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.