
ಐಎನ್‌ಎಸ್ ಮಾಹೆ
(ಚಿತ್ರ ಕೃಪೆ: X/@IndiannavyMedia)
ಮುಂಬೈ: ಜಲಾಂತರ್ಗಾಮಿ ನಿಗ್ರಹ ಯುದ್ಧ ನೌಕೆ ಐಎನ್‌ಎಸ್ 'ಮಾಹೆ' ಭಾರತೀಯ ನೌಕಾಪಡೆಗೆ ಇಂದು (ಸೋಮವಾರ) ಸೇರ್ಪಡೆಗೊಂಡಿತು.
ದೇಶೀಯವಾಗಿ ನಿರ್ಮಿತ ಐಎನ್‌ಎಸ್ 'ಮಾಹೆ' ಸೇರ್ಪಡೆಯೊಂದಿಗೆ ಭಾರತೀಯ ನೌಕಾಪಡೆ ಮತ್ತಷ್ಟು ಬಲವರ್ಧನೆಯಾಗಿದೆ.
ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ.
ಐಎನ್‌ಎಸ್ ಮಾಹೆ ಯುದ್ಧ ನೌಕೆಯನ್ನು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL) ನಿರ್ಮಿಸಿದೆ. ಇದರ ವಿನ್ಯಾಸ ಹಾಗೂ ನಿರ್ಮಾಣ ಆತ್ಮನಿರ್ಭರ ಭಾರತದ ಉಪಕ್ರಮವನ್ನು ಪ್ರತಿನಿಧಿಸುತ್ತದೆ.
ದೇಶದ ಕರಾವಳಿಯಲ್ಲಿ ಪ್ರಾಬಲ್ಯ ಸಾಧಿಸಲು ಬೇಕಾದ ಸಾಮರ್ಥ್ಯವನ್ನು ಮಾಹೆ ಯುದ್ಧ ನೌಕೆ ಹೊಂದಿದೆ. ರಹಸ್ಯ ಕಾರ್ಯಾಚರಣೆ, ಕರಾವಳಿ ಗಸ್ತು, ಜಲಾಂತರ್ಗಾಮಿ ನಿಗ್ರಹ ಸಾಮರ್ಥ್ಯವನ್ನು ಇದು ಹೊಂದಿರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.