ADVERTISEMENT

ಅಮೆರಿಕ, ಇಸ್ರೇಲ್‌ನಿಂದ ಇರಾನ್ ಮೇಲೆ ದಾಳಿ ಸೇರಿ ಈ ದಿನದ ಪ್ರಮುಖ ಸುದ್ದಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಫೆಬ್ರುವರಿ 2026, 14:41 IST
Last Updated 28 ಫೆಬ್ರುವರಿ 2026, 14:41 IST
<div class="paragraphs"><p>ಈ ದಿನದ ಪ್ರಮುಖ 10 ಸುದ್ದಿಗಳು</p></div>

ಈ ದಿನದ ಪ್ರಮುಖ 10 ಸುದ್ದಿಗಳು

   

ಅಮೆರಿಕ, ಇಸ್ರೇಲ್‌ನಿಂದ ಇರಾನ್ ಮೇಲೆ ದಾಳಿ, ಆಂಧ್ರಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟಗೊಂಡು 18 ಸಾವು ಸೇರಿ ‍ಪ್ರಮುಖ ಸುದ್ದಿಗಳು ಇಲ್ಲಿವೆ

ಖಮೇನಿ ಗುರಿಯಾಗಿಸಿಕೊಂಡು ಇಸ್ರೇಲ್, ಅಮೆರಿಕ ಜಂಟಿ ದಾಳಿ: ಇರಾನ್‌ನಿಂದ ಪ್ರತಿದಾಳಿ

ಟೆಹರಾನ್: ಪರಮಾಣು ಒಪ್ಪಂದದ ಮಾತುಕತೆಗೆ ಸ್ಪಂದಿಸದ ಇರಾನ್‌ ಮೇಲೆ ಅಮೆರಿಕ–ಇಸ್ರೇಲ್‌ ಜಂಟಿಯಾಗಿ ದಾಳಿ ನಡೆಸಿದೆ. ಇಸ್ರೇಲ್‌ ರಾಜಧಾನಿ ಮತ್ತು ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ವಾಯನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್‌ ಪ್ರತೀಕಾರದ ದಾಳಿ ನಡೆಸಿದೆ.

ADVERTISEMENT

ಮಧ್ಯಪ್ರಾಚ್ಯದಲ್ಲಿ ಯುದ್ಧದ ಸದ್ದು: ಬಾಂಬುಗಳ ಮಧ್ಯೆ ಬದುಕಿಗೆ ಏನೆಲ್ಲಾ ತೊಂದರೆ?

ಎಐ ಚಿತ್ರ

ಪರಮಾಣು ಒಪ್ಪಂದ ಮಾತುಕತೆಗೆ ಇರಾನ್‌ ಸ್ಪಂದಿಸದ ಕಾರಣ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್‌ ಮೇಲೆ ಇಂದು ದಾಳಿ ನಡೆಸಿವೆ. ಇರಾನ್‌ ಕೂಡ ಇಸ್ರೇಲ್‌ ಮೇಲೆ ಪ್ರತಿದಾಳಿ ನಡೆಸಿದೆ. ಈ ಘಟನೆಗಳು ಮಧ್ಯಪ್ರಾಚ್ಯದಾದ್ಯಂತ ತೀವ್ರತರವಾದ ಅಸ್ತವ್ಯಸ್ತತೆಗೆ ಕಾರಣವಾಗಿವೆ.

ಇರಾನ್‌ನ ಯಾವ ನಗರಗಳ ಮೇಲೆ ಇಸ್ರೇಲ್, ಅಮೆರಿಕದಿಂದ ದಾಳಿ?

ಟೆಹರಾನ್‌: ರಾಜಧಾನಿ ಟೆಹರಾನ್‌ ಸೇರಿದಂತೆ ಇರಾನ್‌ನ 30ಕ್ಕೂ ಹೆಚ್ಚು ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ಮತ್ತು ಅಮೆರಿಕ ಜಂಟಿಯಾಗಿ ದಾಳಿ ನಡೆಸಿವೆ ಎಂದು ವರದಿಯಾಗಿದೆ.

ಮಧ್ಯಪ್ರಾಚ್ಯದಲ್ಲಿರುವ ಅಮೆರಿಕ ವಾಯುನೆಲೆಗಳ ಮೇಲೆ ಇರಾನ್‌ನಿಂದ ಪ್ರತೀಕಾರದ ದಾಳಿ

ಬಹರೈನ್‌ನ ಮನಾಮದಲ್ಲಿ ಸ್ಫೋಟದಿಂದ ಎದ್ದಿರುವ ಹೊಗೆ

ಅಮೆರಿಕ ಹಾಗೂ ಇಸ್ರೇಲ್ ಸೇರಿ ನಡೆಸಿದ ಜಂಟಿ ದಾಳಿಗೆ ಪ್ರತೀಕಾರವಾಗಿ ‘ಆಪರೇಷನ್ ಟ್ರೂ ಪ್ರಾಮಿಸ್ 4’ ಹೆಸರಿನಲ್ಲಿ ಇರಾನ್ ಪ್ರತಿದಾಳಿ ನಡೆಸಿದೆ.

ದುಬೈ ಸೇರಿ ಗಲ್ಫ್‌ ದೇಶಗಳಲ್ಲಿನ ಭಾರತೀಯರಿಗೆ ಮಾರ್ಗಸೂಚಿ ಬಿಡುಗಡೆ: ರಾಯಭಾರ ಕಚೇರಿ

ನವದೆಹಲಿ/ದುಬೈ: ಇರಾನ್‌, ಸೌದಿ ಅರೇಬಿಯಾ, ಯುಎಇ ಮತ್ತು ಜೋರ್ಡನ್ ಸೇರಿದಂತೆ ಗಲ್ಫ್‌ ರಾಷ್ಟ್ರಗಳಲ್ಲಿನ ಭಾರತೀಯರು ಎಚ್ಚರಿಕೆಯಿಂದ ಇರುವಂತೆ ಮತ್ತು ಸ್ಥಳೀಯಾಡಳಿತಗಳ ಮಾರ್ಗಸೂಚಿಗಳನ್ನು ಪಾಲಿಸುವಂತೆ ಅಲ್ಲಿರುವ ಭಾರತದ ರಾಯಭಾರ ಕಚೇರಿಗಳು ಮನವಿ ಮಾಡಿವೆ.

ಆಂಧ್ರಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 18 ಸಾವು, 6 ಮಂದಿಗೆ ಗಂಭೀರ ಗಾಯ

ಸ್ಫೋಟದಿಂದ ಎದ್ದಿರುವ ಹೊಗೆ

UAE ಮೇಲೂ ಇರಾನ್‌ ಕ್ಷಿಪಣಿ ದಾಳಿ: ನಾಗರಿಕರ ಮೊಬೈಲ್‌ಗಳಿಗೆ ಎಚ್ಚರಿಕೆಯ ಸಂದೇಶ

ಅಬುದಾಬಿ ಮೇಲೆ ಇರಾನ್‌ ಕ್ಷಿಪಣಿ ದಾಳಿಯ ದೃಶ್ಯ

ದುಬೈ: ತನ್ನ ಪ್ರದೇಶವನ್ನು ಗುರಿಯಾಗಿಸಿಕೊಂಡು ಇರಾನ್‌ ಹಾರಿಸಿದ ಕ್ಷಿಪಣಿಗಳನ್ನು ಸಂಯುಕ್ತ ಅರಬ್‌ ಸಂಸ್ಥಾನವು ಯಶಸ್ವಿಯಾಗಿ ತಡೆದಿದೆ ಎಂದು ಅಲ್ಲಿನ ರಕ್ಷಣಾ ಇಲಾಖೆ ಶನಿವಾರ ಹೇಳಿದೆ.

ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ನಮ್ಮ ರೈತರನ್ನು ನಾಶ ಮಾಡಲಿದೆ: ರಾಹುಲ್‌ ಗಾಂಧಿ

ರಾಹುಲ್‌ ಗಾಂಧಿ

ಬರ್ನಾಲಾ: ಭಾರತ–ಅಮೆರಿಕ ವ್ಯಾಪಾರ ಒಪ್ಪಂದವು ಭಾರತೀಯ ರೈತರನ್ನು ಸರ್ವನಾಶ ಮಾಡಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಆರೋಪಿಸಿದರು.

ಮಧ್ಯ ಪ್ರದೇಶದ ಕುನೊ ಉದ್ಯಾನಕ್ಕೆ ಬಂದ 9 ಚೀತಾ

ಶಿಯೋಪುರ್‌: ದಕ್ಷಿಣ ಆಫ್ರಿಕಾದಿಂದ 9 ಚೀತಾಗಳನ್ನು ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಶನಿವಾರ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. 

ಸದ್ಯದ ರಾಜಕೀಯ ಬೆಳವಣಿಗೆ ನೋಡಿ ವೈರಾಗ್ಯ ಆವರಿಸುತ್ತಿದೆ: ಎಚ್ ಡಿ. ಕುಮಾರಸ್ವಾಮಿ

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ‘ಸದ್ಯದ ರಾಜಕೀಯ ಬೆಳವಣಿಗೆ ನೋಡಿ ನನಗೆ ವೈರಾಗ್ಯ ಆವರಿಸುತ್ತಿದೆ’ ಎಂದು‌ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.