ಪ್ರಿಯಾಂಕಾ ಗಾಂಧಿ ವಾದ್ರಾ
(ಪಿಟಿಐ ಚಿತ್ರ)
ನವದೆಹಲಿ: ‘ಇಸ್ರೇಲ್ ಜನಾಂಗೀಯ ಹತ್ಯೆಯಲ್ಲಿ ತೊಡಗಿದೆ’ ಎಂದು ಮಂಗಳವಾರ ಆರೋಪಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ‘ಪ್ಯಾಲೆಸ್ಟೀನಿಯರನ್ನು ಇಸ್ರೇಲ್ ನಾಶಗೊಳಿಸುತ್ತಿರುವಾಗ ಭಾರತ ಸರ್ಕಾರ ಮೌನಕ್ಕೆ ಜಾರಿದೆ’ ಎಂದು ಟೀಕೆ ಮಾಡಿದ್ದಾರೆ.
ಇಸ್ರೇಲ್ ಸುಮಾರು 60,000 ಜನರನ್ನು ಕೊಂದಿದೆ. ಅವರಲ್ಲಿ 18,430 ಮಕ್ಕಳಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.
‘ಈಗಾಗಲೇ ಮಕ್ಕಳು ಸೇರಿದಂತೆ ನೂರಾರು ಜನರನ್ನು ಹಸಿವಿನಿಂದ ಕೊಂದಿರುವ ಆ ದೇಶ, ಲಕ್ಷಾಂತರ ಜನರನ್ನು ಹಸಿವಿನಿಂದ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಇಷ್ಟೆಲ್ಲ ಕೃತ್ಯಗಳು ನಡೆಯುತ್ತಿರುವಾಗ ಮೌನ ಮತ್ತು ನಿಷ್ಕ್ರಿಯವಾಗಿ ಇರುವುದು ಅಪರಾಧಗಳನ್ನು ಬೆಂಬಲಿಸಿದಂತೆ. ಅದೂ ಸಹ ದೊಡ್ಡ ಅಪರಾಧ ಮತ್ತು ನಾಚಿಕೆಗೇಡಿನ ಸಂಗತಿ’ ಎಂದು ಅವರು ಭಾರತ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
‘ಪ್ಯಾಲೆಸ್ಟೀನಿನ ಮಣ್ಣಿನಲ್ಲಿ ಅಲ್ ಜಜೀರಾ ಸುದ್ದಿ ವಾಹಿನಿಯ ಐವರು ಪತ್ರಕರ್ತರನ್ನು ಹತ್ಯೆ ಮಾಡಿರುವುದು ಖಂಡನೀಯ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.