ADVERTISEMENT

2023ರಲ್ಲಿ ನಿಸಾರ್‌ ಉಪಗ್ರಹ ಉಡಾವಣೆಗೆ ಸಿದ್ಧತೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್‌

ಪಿಟಿಐ
Published 30 ಜುಲೈ 2021, 16:20 IST
Last Updated 30 ಜುಲೈ 2021, 16:20 IST
ಇಸ್ರೊ
ಇಸ್ರೊ   

ನವದೆಹಲಿ: ನಾಸಾ ಮತ್ತು ಇಸ್ರೊ ಸಹಭಾಗಿತ್ವದ ನಿಸಾರ್‌ ಉಪಗ್ರಹವನ್ನು (ನಾಸಾ– ಇಸ್ರೊ ಸಿಂಥೆಟಿಕ್ ಅಪರ್ಚರ್‌ ರೇಡಾರ್‌) 2023ರಲ್ಲಿ ಉಡಾವಣೆ ಮಾಡುವ ಪ್ರಸ್ತಾವನೆ ಇದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವ ಜಿತೇಂದ್ರ ಸಿಂಗ್‌ ಹೇಳಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಅವರು, ಜಗತ್ತಿನಾದ್ಯಂತ ಇರುವ ನೈಸರ್ಗಿಕ ಸಂಪನ್ಮೂಲಗಳನ್ನು ಗುರುತಿಸುವುದು, ಭೂಕಂಪದಂತಹ ನೈಸರ್ಗಿಕ ವಿಕೋಪಗಳ ಮಾಹಿತಿ ಪಡೆಯುವುದು ಈ ಯೋಜನೆ ಉದ್ದೇಶ ಎಂದು ಹೇಳಿದ್ದಾರೆ.

ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ಅರಿಯುವುದರ ಜೊತೆಗೆ ಭೂಮಿ ಮತ್ತು ಕರಾವಳಿ ಪ್ರದೇಶದ ಪ್ರಕ್ರಿಯೆಗಳ ಮಾಹಿತಿ ಸಂಗ್ರಹಕ್ಕೆ ಈ ಉಪಗ್ರಹ ನೆರವಾಗಲಿದೆ ಎಂದಿದ್ದರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.