ADVERTISEMENT

ಸಾಗರ ಪ್ರಯಾಣ ತರಬೇತಿ: ಚೆನ್ನೈ ತಲುಪಿದ ಜಪಾನ್ ಪಡೆಯ ‘ಇಟ್ಸುಕುಶಿಮಾ’

ಪಿಟಿಐ
Published 7 ಜುಲೈ 2025, 15:18 IST
Last Updated 7 ಜುಲೈ 2025, 15:18 IST
<div class="paragraphs"><p>ಜಪಾನ್ ಕರಾವಳಿ ರಕ್ಷಣಾ ಪಡೆ ಹಡಗು ಇಟ್ಸುಕುಶಿಮಾ ಸೋಮವಾರ ಚೆನ್ನೈಗೆ ತಲುಪಿತು </p></div>

ಜಪಾನ್ ಕರಾವಳಿ ರಕ್ಷಣಾ ಪಡೆ ಹಡಗು ಇಟ್ಸುಕುಶಿಮಾ ಸೋಮವಾರ ಚೆನ್ನೈಗೆ ತಲುಪಿತು

   

– ಪಿಟಿಐ ಚಿತ್ರ

ನವದೆಹಲಿ: ತನ್ನ ಜಾಗತಿಕ ಸಾಗರ ಪ್ರಯಾಣ ತರಬೇತಿಯ ಭಾಗವಾಗಿ ಜಪಾನ್‌ ಕರಾವಳಿ ರಕ್ಷಣಾ ಪಡೆಯ ಹಡಗು ‘ಇಟ್ಸುಕುಶಿಮಾ’ ಸೋಮವಾರ ಚೆನ್ನೈ ಬಂದರಿಗೆ ತಲುಪಿದೆ. ಈ ವಾರಪೂರ್ತಿ ಅದು ಚೆನ್ನೈನಲ್ಲಿ ಇರಲಿದ್ದು, ಈ ವೇಳೆ ಹಲವಾರು ಸಮರಾಭ್ಯಾಸದಲ್ಲಿ ಅದು ತೊಡಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈ ಸಭೆಗಳ ನಂತರ, ‘ಇಟ್ಸುಕುಶಿಮಾ’ ಭಾರತೀಯ ಕರಾವಳಿ ರಕ್ಷಣಾ ಪಡೆ (ಐಸಿಜಿ)ಯೊಂದಿಗೆ ‘ಎಕ್ಸರ್ಸೈಜ್ ಜಾ ಮಾತಾ’ (ನಂತರ ನೋಡೋಣ) ಎಂಬ ಜಂಟಿ ಸಮುದ್ರ ಸಮರಾಭ್ಯಾಸದಲ್ಲಿ ಭಾಗವಹಿಸಲಿದೆ. ಸಮುದ್ರದಲ್ಲಿ ಸಮನ್ವಯ ಸಾಧಿಸಲು ಮತ್ತು ಕಾರ್ಯಾಚರಣೆಯಲ್ಲಿ ಒಗ್ಗಟ್ಟು ಹೆಚ್ಚಿಸಲು ಈ ಸಮರಾಭ್ಯಾಸವು ನೆರವಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಐಸಿಜಿಯ ನಾಲ್ವರು ಅಧಿಕಾರಿಗಳು ಸಿಂಗಾಪುರಕ್ಕೆ ಹೋಗುವ ಸಮಯದಲ್ಲಿ ‘ಇಟ್ಸುಕುಶಿಮಾ’ದಲ್ಲಿ ಸೀ ರೈಡರ್‌ಗಳಾಗಿ ಪ್ರಯಾಣಿಸುತ್ತಾರೆ. ಇದು ಎರಡೂ ಪಡೆಗಳ ನಡುವಿನ ಸೌಹಾರ್ದ ಮತ್ತು ವೃತ್ತಿಪರ ವಿನಿಮಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಐಸಿಜಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.