ADVERTISEMENT

ಲಾಕ್‌ಡೌನ್ | ಕೆಲಸ ಕಳೆದುಕೊಂಡ ಕಾರ್ಮಿಕ; ಮೂವರು ಹೆಣ್ಣು ಮಕ್ಕಳೊಂದಿಗೆ ಆತ್ಮಹತ್ಯೆ

ಪಿಟಿಐ
Published 8 ಆಗಸ್ಟ್ 2020, 13:59 IST
Last Updated 8 ಆಗಸ್ಟ್ 2020, 13:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಿಂದ್‌(ಮಧ್ಯಪ್ರದೇಶ):ಕೊರೊನಾ ವೈರಸ್ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿದ್ದ ಕಾರ್ಮಿಕನೊಬ್ಬ ಮಧ್ಯಪ್ರದೇಶದ ಭಿಂದ್‌ ಜಿಲ್ಲೆಯಲ್ಲಿ ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜೇಶ್‌ ರಾಜಕ್‌ (42) ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಕೆಲಸ ಕಳೆದುಕೊಂಡ ಬಳಿಕಅಂಧಿಯಾರಿ ಗ್ರಾಮಕ್ಕೆ ವಾಪಸಾಗಿದ್ದರು.ಹಣಕಾಸು ವಿಚಾರವಾಗಿರಾಜೇಶ್‌, ಪತ್ನಿಯೊಂದಿಗೆ ಜಗಳವಾಡುತ್ತಿದ್ದಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಂಪತಿ ನಡುವೆ ಶುಕ್ರವಾರ ರಾತ್ರಿಯೂ ಜಗಳ ನಡೆದಿದ್ದು, ರಾಜೇಶ್‌ ತನ್ನ ಹೆಣ್ಣು ಮಕ್ಕಳಾದ ಅನುಷ್ಕಾ(10), ಚೀನಾ (8), ಸಂಧ್ಯಾ (5) ರನ್ನು ಹಗ್ಗದಿಂದ ಸೊಂಟಕ್ಕೆ ಕಟ್ಟಿಕೊಂಡು ಮನೆ ಸಮೀಪವಿರುವ ಬಾವಿಗೆ ಹಾರಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ದಂಪತಿಗೆ ಇನ್ನೂ ಎರಡೂವರೆ ವರ್ಷದ ಮಗಳು ಇರುವುದಾಗಿ ತಿಳಿದು ಬಂದಿದ್ದು,ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಉಪ ಪೊಲೀಸ್‌ ಇನ್ಸ್‌ಪೆಕ್ಟರ್‌ ರಾಜೇಶ್‌ ಹೀಗಂಕರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.