ADVERTISEMENT

ಲೈಂಗಿಕ ದೌ‌ರ್ಜನ್ಯ ಪ್ರಕರಣ: ಮಲಯಾಳ ನಟ ದಿಲೀಪ್ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ

ಪಿಟಿಐ
Published 27 ಫೆಬ್ರುವರಿ 2026, 12:14 IST
Last Updated 27 ಫೆಬ್ರುವರಿ 2026, 12:14 IST
<div class="paragraphs"><p> ನಟ ದಿಲೀಪ್ </p></div>

ನಟ ದಿಲೀಪ್

   

ಕೊಚ್ಚಿ: ಭಾರಿ ವಿವಾದಕ್ಕೆ ಕಾರಣವಾಗಿದ್ದ 2017ರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳ ಚಿತ್ರನಟ ದಿಲೀಪ್ ಹಾಗೂ ಇನ್ನಿತರರನ್ನು ಖುಲಾಸೆಗೊಳಿಸಿದ ಸೆಷನ್ಸ್ ನ್ಯಾಯಾಲಯದ ಆದೇಶದ ವಿರುದ್ಧ ಕೇರಳ ಸರ್ಕಾರ ಶುಕ್ರವಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದೆ.

ಅಲ್ಲದೆ ಪ್ರಕರಣದಲ್ಲಿ ದೋಷಿಗಳಾಗಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ 6 ಮಂದಿಯ ಶಿಕ್ಷೆಯನ್ನು ಮತ್ತಷ್ಟು ಕಠಿಣಗೊಳಿಸಬೇಕು ಎಂದೂ ಅರ್ಜಿಯಲ್ಲಿ ಕೋರಲಾಗಿದೆ.

ADVERTISEMENT

ಪ್ರಕರಣದಲ್ಲಿ 8ನೇ ಅರೋಪಿಯಾಗಿರಯವ ದಿಲೀಪ್ ಸೇರಿ ಚಾರ್ಲಿ ಥೋಮಸ್ (ಎ7), ಸುನಿಲ್ ಕುಮಾರ್ ಅಲಿಯಾಸ್ ಮೇಸ್ತ್ರಿ ಸನಿಲ್ (ಎ9) ಹಾಗೂ ಶರತ್ (ಎ 15) ಅವರನ್ನು ಕೋರ್ಟ್ ಖುಲಾಸೆಗೊಳಿಸಿತ್ತು.

ಪ್ರಕರಣದ ಮೊದಲ ಆರು ಆರೋಪಿಗಳಾದ ಸುನಿಲ್ ಅಲಿಯಾಸ್ ಪಲ್ಸರ್ ಸುನಿ, ಮಾರ್ಟಿನ್ ಆಂಟೋನಿ, ಮಣಿಕಂಠನ್ ಬಿ, ವಿಜೇಶ್ ವಿ ಪಿ, ಸಲೀಂ ಎಚ್ ಮತ್ತು ಪ್ರದೀಪ್ ಅವರನ್ನು ವಿಚಾರಣಾ ನ್ಯಾಯಾಲಯವು ದೋಷಿಗಳೆಂದು ಘೋಷಿಸಿ ಶಿಕ್ಷೆ ವಿಧಿಸಿದೆ.

ಈ ಮೇಲ್ಮನವಿಯ ವಿಚಾರಣೆಯು ಮುಂದಿನ ವಾರ ನಡೆಯುವ ನಿರೀಕ್ಷೆ ಇದೆ ಎಂದು ರಾಜ್ಯ ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.