ADVERTISEMENT

ಉತ್ತರಾ ಖಂಡದ ವಿಧಾನಸಭೆ ವಿರೋಧ ಪಕ್ಷದ ನಾಯಕಿ ಇಂದಿರಾ ಹೃದಯೇಶ್ ನಿಧನ

ಪಿಟಿಐ
Published 13 ಜೂನ್ 2021, 10:00 IST
Last Updated 13 ಜೂನ್ 2021, 10:00 IST
ಇಂದಿರಾ ಹೃದಯೇಷ್ (ಕೃಪೆ: ಟ್ವಿಟರ್/@IndiraHridayesh)
ಇಂದಿರಾ ಹೃದಯೇಷ್ (ಕೃಪೆ: ಟ್ವಿಟರ್/@IndiraHridayesh)   

ಡೆಹರಾಡೂನ್: ಉತ್ತರಾ ಖಂಡದ ವಿಧಾನಸಭೆಯ ವಿರೋಧ ಪಕ್ಷದ ನಾಯಕಿ ಇಂದಿರಾ ಹೃದಯೇಶ್ ಅವರು ನವದೆಹಲಿಯಲ್ಲಿಂದು ಮೃತಪಟ್ಟಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ.ಅವರಿಗೆ 80 ವರ್ಷ ವಯಸ್ಸಾಗಿತ್ತು.

ಉತ್ತರಾ ಖಂಡದ ಪಕ್ಷದ ಉಸ್ತುವಾರಿ ದೇವೇಂದ್ರ ಯಾದವ್ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಇಂದಿರಾ ಭಾಗವಹಿಸಿದ್ದರು.

'ಇಂದಿರಾ ಹೃದಯೇಶ್ ಹಲವಾರು ಸಮುದಾಯಗಳ ಸೇವಾ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದ್ದರು. ಶಾಸಕರಾಗಿ ಪರಿಣಾಮಕಾರಿ ಛಾಪು ಮೂಡಿಸಿದವರು ಮತ್ತು ಅವರು ಹೆಚ್ಚಿನ ಆಡಳಿತಾತ್ಮಕ ಅನುಭವವನ್ನೂ ಹೊಂದಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ADVERTISEMENT

ಕಾಂಗ್ರೆಸ್ ನಾಯಕ ರಾಹುಲ್ ಗಾಂದಿ ಟ್ವೀಟ್ ಮಾಡಿ, ಇಂದಿರಾ ಹೃದಯೇಶ್ ಅವರು ಉತ್ತರಾ ಖಂಡದಲ್ಲಿ ಕಾಂಗ್ರೆಸ್‌ನ ಪ್ರಬಲ ಕೊಂಡಿಯಾಗಿದ್ದರು. ಕೊನೆಯವರೆಗೂ ಅವರು ತಮ್ಮ ಜೀವನವನ್ನು ಸಾರ್ವಜನಿಕ ಸೇವೆಗಾಗಿ ಅರ್ಪಿಸಿದ್ದರು. ಅವರ ಸಾಮಾಜಿಕ ಮತ್ತು ರಾಜಕೀಯ ಕೊಡುಗೆಗಳು ಸ್ಫೂರ್ತಿಯಾಗಿವೆ ಎಂದು ಹೇಳಿದ್ದಾರೆ.

ಉತ್ತರಾ ಖಂಡದ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರು ಇಂದಿರಾ ಅವರ ಸಾವಿಗೆ ಸಂತಾಪ ಸೂಚಿಸಿದ್ದು, 'ನಾಲ್ಕು ದಶಕಗಳ ಕಾಲ ಉತ್ತರ ಪ್ರದೇಶ ಮತ್ತು ಉತ್ತರಾ ಖಂಡದ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಇಂದಿರಾ ಅವರ ಸಾವು ರಾಜ್ಯಕ್ಕೆ ದೊಡ್ಡ ನಷ್ಟವಾಗಿದ್ದು, ಸಂಸತ್ತಿನ ಕಾರ್ಯವಿಧಾನಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದರು. ವೈಯಕ್ತಿಕವಾಗಿಯೂ ನಷ್ಟವಾಗಿದ್ದು, ಅವರಿಂದ ದೊಡ್ಡಕ್ಕನ ಪ್ರೀತಿ ದೊರೆಯುತ್ತಿತ್ತು' ಎಂದು ಹೇಳಿದ್ದಾರೆ.

ಸರ್ಕಾರದ ವಕ್ತಾರ ಮತ್ತು ಕ್ಯಾಬಿನೆಟ್ ಸಚಿವ ಸುಬೋಧ್ ಉನಿಯಾಲ್ ಅವರು ಮಾತನಾಡಿ, 'ಅವರ ಪೀಳಿಗೆಯ ಇತರ ರಾಜಕಾರಣಿಗಳು ಇಂದಿರಾ ಅವರಿಂದ ಸಾಕಷ್ಟು ಕಲಿತಿದ್ದು, ಅವರು ಪಕ್ಷ ಆಧಾರಿತ ರಾಜಕೀಯದಿಂದ ಮೇಲಿದ್ದರು' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.