ADVERTISEMENT

ಲೋಕಸಭೆ ಭದ್ರತಾ ವೈಫಲ್ಯಕ್ಕೆ ಮೈಸೂರು ನಂಟು: ಯಾರು ಈ ಮನೋರಂಜನ್?

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2023, 11:32 IST
Last Updated 13 ಡಿಸೆಂಬರ್ 2023, 11:32 IST
   

ಬೆಂಗಳೂರು: ಲೋಕಸಭೆಯ ಕಲಾಪದ ವೇಳೆಯೇ ಒಳನುಗ್ಗಿದ ಪ್ರಕರಣದಲ್ಲಿ ಗುರುತಿಸಿಕೊಂಡಿರುವ ಆರೋಪಿಗಳಲ್ಲಿ ಒಬ್ಬನಾದ ಮನೋರಂಜನ್, ಮೈಸೂರಿನವನು.

34 ವರ್ಷದ ಮನೋರಂಜನ್ ಮೈಸೂರಿನ ವಿಜಯನಗರ 2ನೇ ಹಂತದ ನಿವಾಸಿಯಾಗಿರುವ ದೇವರಾಜೇ ಗೌಡ ಅವರ ‍ಪುತ್ರ.

ಮೈಸೂರಿನಲ್ಲಿ ಹುಟ್ಟಿ, ಅಲ್ಲಿಯೇ ಪ್ರಾಥಮಿಕ ಹಾಗೂ ಪದವಿಪೂರ್ವ ಶಿಕ್ಷಣ ಪಡೆದಿದ್ದ.

ADVERTISEMENT

ಮನೋರಂಜನ್ ಮೂಲತಃ ಹಾಸನ ಜಿಲ್ಲೆ ಅರಕಲಗೂಡಿನ ಮಲ್ಲಾಪುರ ಗ್ರಾಮದವನಾಗಿದ್ದು, ಬೆಂಗಳೂರಿನ ಬಿಐಟಿ ಕಾಲೇಜಿನಿಂದ ಬಿಇ ಪದವಿ ಪಡೆದು ಮನೆಯಲ್ಲಿದ್ದ ಎಂದು ತಿಳಿದು ಬಂದಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅರೋಪಿಯ ತಂದೆ, ದೇವರಾಜೇ ಗೌಡ, 'ಮಗ, ಸಮಾಜದ ಬಗ್ಗೆ ಒಲವು ಹೊಂದಿದ್ದ. ನೊಂದವರಿಗೆ ಸಹಾಯ ಮಾಡಬೇಕೆಂಬ ಮನೋಭಾವವಿತ್ತು. ಮನೆಯಲ್ಲಿದ್ದ ಪುಸ್ತಕಗಳನ್ನು ಹೆಚ್ಚು ಓದುತ್ತಿದ್ದ. ಆಗಾಗ ದೆಹಲಿ, ಬೆಂಗಳೂರಿಗೆ ತೆರಳುತ್ತಿದ್ದ. ತಪ್ಪು ಮಾಡಿದ್ದರೆ ಗಲ್ಲುಶಿಕ್ಷೆಯಾಗಲಿ' ಎಂದರು.

ಮನೋರಂಜನ್ ಮನೆಗೆ ಎಸಿಪಿ ಭೇಟಿ

ಮನೋರಂಜನ್ ಅವರ ವಿಜಯನಗರದಲ್ಲಿರುವ 2ನೇ ಹಂತದಲ್ಲಿರುವ ನಿವಾಸಕ್ಕೆ ವಿಜಯನಗರ ಉಪ ವಿಭಾಗದ ಉಪ ಪೊಲೀಸ್ ಆಯುಕ್ತ ಗಜೇಂದ್ರ ಪ್ರಸಾದ್ ಭೇಟಿ ನೀಡಿ ಅವರ ತಂದೆ ದೇವರಾಜೇ ಗೌಡ ಅವರಿಂದ ಮಗನ ಬಗ್ಗೆ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.