ADVERTISEMENT

ಮಕರ ಸಂಕ್ರಾಂತಿ: ನಾಡಿನ ಜನತೆಗೆ ಪ್ರಧಾನಿ ಮೋದಿ, ಖರ್ಗೆ ಸೇರಿ ಗಣ್ಯರ ಶುಭಾಶಯ

ಪಿಟಿಐ
Published 14 ಜನವರಿ 2026, 5:12 IST
Last Updated 14 ಜನವರಿ 2026, 5:12 IST
<div class="paragraphs"><p>ಮಕರ ಸಂಕ್ರಾಂತಿ ಹಬ್ಬದ ಕಬ್ಬು, ಎಳ್ಳು ಬೆಲ್ಲ </p></div>

ಮಕರ ಸಂಕ್ರಾಂತಿ ಹಬ್ಬದ ಕಬ್ಬು, ಎಳ್ಳು ಬೆಲ್ಲ

   

–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ನವದೆಹಲಿ: ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬದ ಸಡಗರ ಮನೆ ಮಾಡಿದೆ. ಹೊಸ ವರ್ಷದ ಮೊದಲ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಗಣ್ಯರು ನಾಡಿನ ಜನತೆಗೆ ಶುಭ ಕೋರಿದ್ದಾರೆ.

ADVERTISEMENT

‘ದೇಶದ ವಿವಿಧ ಭಾಗಗಳಲ್ಲಿ ಸ್ಥಳೀಯ ಸಂಪ್ರದಾಯಗಳು ಮತ್ತು ಪದ್ಧತಿಗಳ ಪ್ರಕಾರ ಆಚರಿಸಲಾಗುವ ಸುಗ್ಗಿಯ ಹಬ್ಬವಾದ ಮಕರ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರತಿಯೊಬ್ಬರ ಸಂತೋಷ, ಸಮೃದ್ಧಿ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಪ್ರಧಾನಿ ಮೋದಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಉತ್ತರಾಯಣದ ಶುಭ ಸಂದರ್ಭದಲ್ಲಿ ಹೃತ್ಪೂರ್ವಕ ಶುಭಾಶಯಗಳು! ಈ ಪವಿತ್ರ ಮಕರ ಸಂಕ್ರಾಂತಿ ಹಬ್ಬವು ನಿಮ್ಮ ಜೀವನದಲ್ಲಿ ಸಂತೋಷ, ಒಗ್ಗಟ್ಟಿನ ಮನೋಭಾವ ಹೆಚ್ಚಿಸುವುದರ ಜತೆಗೆ ನಮ್ಮನ್ನು ಉಜ್ವಲ ಭವಿಷ್ಯದತ್ತ ಮುನ್ನಡೆಸಲಿ’ ಎಂದೂ ಅವರು ಶುಭ ಹಾರೈಸಿದ್ದಾರೆ.

ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ‘ಮಾಘಿ, ಬಿಹು’ ಎಂದು ಕರೆಯಲಾಗುವ, ಸಾರ್ವತ್ರಿಕವಾಗಿ ಮಕರ ಸಂಕ್ರಾಂತಿ ಎಂದು ಕರೆಯಲಾಗುವ ಹಬ್ಬಕ್ಕೂ ಮೋದಿ ಪ್ರತ್ಯೇಕ ಪೋಸ್ಟ್‌ಗಳ ಮೂಲಕ ಶುಭ ಕೋರಿದ್ದಾರೆ.

‘ಮಕರ ಸಂಕ್ರಾಂತಿ, ಪೊಂಗಲ್, ಸುಗ್ಗಿ ಹಬ್ಬ, ಮಾಘಿ, ಭೋಗಿ, ಬಿಹು, ಖಿಚಡಿ, ಪೌಷ್ ಪರ್ವ, ಉತ್ತರಾಯಣ ಮತ್ತು ಮಕರವಿಳಕ್ಕು ಹಬ್ಬಗಳು ಪ್ರತಿಯೊಬ್ಬರ ಜೀವನದಲ್ಲಿ ಅಪರಿಮಿತ ಸಂತೋಷ ಮತ್ತು ಅನಿಯಂತ್ರಿತ ಸಮೃದ್ಧಿಯನ್ನು ತರಲಿ. ಎಲ್ಲರಿಗೂ ಹಬ್ಬದ ಶುಭಾಶಯಗಳು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವುದನ್ನೇ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ಎಣಿಕೆಯಂತೆ ಹನ್ನೆರಡು ಸಂಕ್ರಾಂತಿಗಳು ಒಂದು ವರ್ಷದಲ್ಲಿ ಉಂಟಾಗುತ್ತವೆ. ಆದರೆ, ಮಕರ ಸಂಕ್ರಾಂತಿಯನ್ನೇ ವಿಶೇಷವಾಗಿ ಆಚರಿಸಲು ಕಾರಣ ಎಂದರೆ ಸೂರ್ಯನು ತನ್ನ ಸಂಚಾರವನ್ನು ದಕ್ಷಿಣದಿಕ್ಕಿನಿಂದ ಉತ್ತರದ ಕಡೆಗೆ ತಿರುಗಿಸಿಕೊಳ್ಳುತ್ತಾನೆ ಎನ್ನುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.