ADVERTISEMENT

ಮುಂಬೈ ವಿಮಾನ ನಿಲ್ದಾಣದಲ್ಲಿ 67 ವಿದೇಶಿ ಪ್ರಾಣಿಗಳ ರಕ್ಷಣೆ: ಪ್ರಯಾಣಿಕನ ಬಂಧನ

ಪಿಟಿಐ
Published 15 ಸೆಪ್ಟೆಂಬರ್ 2025, 11:10 IST
Last Updated 15 ಸೆಪ್ಟೆಂಬರ್ 2025, 11:10 IST
<div class="paragraphs"><p>ನಕ್ಷತ್ರ ಆಮೆ</p></div>

ನಕ್ಷತ್ರ ಆಮೆ

   

ಮುಂಬೈ: ನಗರದ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 67 ವಿದೇಶಿ ಪ್ರಾಣಿಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಬ್ಯಾಂಕಾಕ್‌ನಿಂದ ಮುಂಬೈಗೆ ಆಗಮಿಸಿದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಯು ನಕ್ಷತ್ರ ಆಮೆಗಳು, ಆಮೆಗಳು, ಮೀರ್‌ಕ್ಯಾಟ್‌, ರಾಕ್ ಹೈರಾಕ್ಸ್, ಸುಗರ್ ಗ್ಲೈಡರ್,‌ ಅಳಿವಿನಂಚಿನಲ್ಲಿರುವ ಮಾನಿಟರ್ ಹಲ್ಲಿಗಳು ಸೇರಿದಂತೆ 67 ಜೀವಂತ ಪ್ರಾಣಿಗಳನ್ನು ಬಾಕ್ಸ್‌ಗಳಲ್ಲಿ ಸಾಗಾಟ ಮಾಡುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ವನ್ಯಜೀವಿ ಸಂರಕ್ಷಣಾ ಕಾಯ್ದೆಯ ನಿಬಂಧನೆಗಳ ಪ್ರಕಾರ, ಕಸ್ಟಮ್ಸ್ ಮತ್ತು ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೊ ವಶಪಡಿಸಿಕೊಂಡ ಪ್ರಾಣಿಗಳನ್ನು ಮೂಲ ದೇಶಕ್ಕೆ ವಾಪಸ್ ಕಳುಹಿಸುತ್ತದೆ. ರೆಸ್ಕಿಂಕ್ ಅಸೋಸಿಯೇಷನ್ ​​ಫಾರ್ ವೈಲ್ಡ್‌ಲೈಫ್ ವೆಲ್ಫೇರ್ (RAWW) ತಜ್ಞರು ಪ್ರಾಣಿಗಳನ್ನು ರಕ್ಷಿಸಲು ಸಹಾಯ ಮಾಡಿದರು ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.