ADVERTISEMENT

ಲಗೇಜ್‌ನಲ್ಲಿ ಏನಿದೆ... ಬಾಂಬ್ ಇದೆ: ವ್ಯಕ್ತಿಗೆ ವಿಮಾನ ಪ್ರವೇಶ ನಿರಾಕರಣೆ, ಬಂಧನ

ಪಿಟಿಐ
Published 3 ಜುಲೈ 2022, 1:18 IST
Last Updated 3 ಜುಲೈ 2022, 1:18 IST
ಕೊಚ್ಚಿ ವಿಮಾನ ನಿಲ್ದಾಣದ ಚಿತ್ರ – ಪಿಟಿಐ
ಕೊಚ್ಚಿ ವಿಮಾನ ನಿಲ್ದಾಣದ ಚಿತ್ರ – ಪಿಟಿಐ   

ಕೊಚ್ಚಿ: ‘ಲಗೇಜ್‌ನಲ್ಲಿ ಏನಿದೆ’ ಎಂದು ಕೇಳಿದ ವಿಮಾನ ನಿಲ್ದಾಣ ಸಿಬ್ಬಂದಿಗೆ, ‘ಬಾಂಬ್‌ ಇದೆ’ ಎಂದು ಉತ್ತರ ಕೊಟ್ಟ ವ್ಯಕ್ತಿ ಮತ್ತು ಅವರ ಪತ್ನಿಗೆ ಕೊಚ್ಚಿಯಲ್ಲಿ ವಿಮಾನ ಪ್ರವೇಶ ನಿರಾಕರಿಸಲಾಗಿದೆ. ಜತೆಗೆ, ಉಡಾಫೆ ಉತ್ತರ ನೀಡಿ ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ್ದ ವ್ಯಕ್ತಿಯನ್ನು ಬಂಧಿಸಿ, ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ವಿದೇಶಕ್ಕೆ ತೆರಳುತ್ತಿದ್ದ ದಂಪತಿ, ಶನಿವಾರ ಮಧ್ಯರಾತ್ರಿ 1.30 ರ ಸುಮಾರಿಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದರು ಎಂದು ಸಿಬ್ಬಂದಿ ಹೇಳಿದ್ದಾರೆ.

ಚೆಕ್-ಇನ್ ಕೌಂಟರ್‌ನಲ್ಲಿರುವ ಸಿಬ್ಬಂದಿ ಲಗೇಜ್‌ನಲ್ಲಿ ಏನಿದೆ ಎಂದು ಕೇಳಿದ್ದಾರೆ. ಸಿಟ್ಟಿಗೆದ್ದ ವ್ಯಕ್ತಿ ‘ಬಾಂಬ್ ಇದೆ’ ಎಂದು ಉತ್ತರಿಸಿದ್ದಾರೆ. ಇದರಿಂದ ವಿಮಾನ ನಿಲ್ದಾಣ ಸಿಬ್ಬಂದಿ ಗಾಬರಿಯಾಗಿದ್ದು, ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಲಾಗಿದೆ.

ADVERTISEMENT

ನಂತರ ಇಬ್ಬರನ್ನೂ ನೆಡುಂಬಶ್ಶೇರಿ ಪೊಲೀಸ್‌ ಠಾಣೆಗೆ ಒಪ್ಪಿಸಲಾಗಿದೆ.

ವ್ಯಕ್ತಿಯನ್ನು ಬಂಧಿಸಿ ನಂತರ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.