ADVERTISEMENT

ಕ್ಷಮಾದಾನ ಅರ್ಜಿ ತಿರಸ್ಕೃತ: ಚುನಾವಣಾ ಆಯೋಗದ ಮೊರೆ ಹೋದ ನಿರ್ಭಯಾ ಅಪರಾಧಿ

ಏಜೆನ್ಸೀಸ್
Published 21 ಫೆಬ್ರುವರಿ 2020, 7:07 IST
Last Updated 21 ಫೆಬ್ರುವರಿ 2020, 7:07 IST
ವಿನಯ್ ಶರ್ಮಾ
ವಿನಯ್ ಶರ್ಮಾ   

ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸುವ ದಿನ ಸಮೀಪಿಸುತ್ತಿದ್ದಂತೆ, ಶಿಕ್ಷೆಯಿಂದ ಪಾರಾಗಲು ಅಪರಾಧಿ ವಿನಯ್ ಶರ್ಮಾ ಶತಾಯಗತಾಯ ಪ್ರಯತ್ನಿಸುತ್ತಿದ್ದಾನೆ. ಗುರುವಾರ ಜೈಲಿನ ಗೋಡೆಗೆ ತಲೆ ಚಚ್ಚಿಕೊಂಡು ವಿನಯ್ ಶರ್ಮಾಗಾಯ ಮಾಡಿಕೊಂಡಿದ್ದನು.

ಇದೀಗ ಕ್ಷಮಾದಾನ ಅರ್ಜಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಶರ್ಮಾ ಪರ ವಾದಿಸುತ್ತಿರುವ ವಕೀಲ ಎ.ಪಿ. ಸಿಂಗ್ ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ. ದೆಹಲಿಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವ ಹೊತ್ತಲ್ಲಿ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಅಂದರೆ ಆಗ ಮನೀಶ್ ಸಿಸೋಡಿಯಾ ಸಚಿವರಾಗಿರುವುದಿಲ್ಲ, ಕ್ಷಮಾದಾನ ಅರ್ಜಿಯನ್ನು ಅವರು ತಿರಸ್ಕರಿಸಲಾಗುವುದಿಲ್ಲ ಎಂದಿದ್ದಾರೆ.

ಜನವರಿ 30ರಂದು ವಿನಯ್ ಶರ್ಮಾನಕ್ಷಮಾದಾನ ಅರ್ಜಿ ದೆಹಲಿ ಸರ್ಕಾರಕ್ಕೆ ತಲುಪಿತ್ತು. ಆ ಹೊತ್ತಲ್ಲಿ ಸರ್ಕಾರ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿತ್ತು. ಫೆಬ್ರುವರಿ 8ರಂದು ನಡೆಯುವ ಚುನಾವಣೆಗಾಗಿ ದೆಹಲಿಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವಾಗ ಸಿಸೋಡಿಯಾ ದೆಹಲಿ ಸರ್ಕಾರದಲ್ಲಿಗೃಹ ಸಚಿವರು ಅಥವಾ ಶಾಸಕರು ಆಗಿರುವುದಿಲ್ಲ ಎಂದು ಎ.ಪಿ. ಸಿಂಗ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಲುವಾಟ್ಸ್‌ಆ್ಯಪ್ ಮೂಲಕ ಸಿಸೋಡಿಯಾ ಕಳಿಸಿದ ಡಿಜಿಟಲ್ ಸಹಿಯನ್ನು ಬಳಸಲಾಗಿತ್ತು. ಚುನಾವಣಾ ಆಯೋಗ, ರಾಷ್ಟ್ರಪತಿ , ಸುಪ್ರೀಂಕೋರ್ಟ್ ಮತ್ತು ಗೃಹ ಸಚಿವಾಲಯದ ಘನತೆಯನ್ನುಈ ರೀತಿ ಕಳೆಯಬಾರದು ಎಂದು ನಾನು ಬಯಸುತ್ತಿದ್ದೇನೆ. ಕ್ಷಮಾದಾನ ಅರ್ಜಿ ತಿರಸ್ಕರಿಸುವಾಗ ದೆಹಲಿಯ ಗೃಹ ಸಚಿವರು ಅಧಿಕಾರದಲ್ಲಿರಲಿಲ್ಲ. ಹೀಗಿದ್ದರೂ ಅವರು ಅದನ್ನು ರಾಷ್ಟ್ರಪತಿಯರಿಗೆಕಳುಹಿಸಿಕೊಟ್ಟರು. ಕ್ಷಮಾದಾನ ಅರ್ಜಿ ತಿರಸ್ಕರಿಸಬಾರದಿತ್ತು. ಈ ಬಗ್ಗೆ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಂಗ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.