ನಕ್ಸಲರು
ಅಮರಾವತಿ: ನಕ್ಸಲ್ ದಂಪತಿ ಜೆ.ನಾಗರಾಜು ಮತ್ತು ಜ್ಯೋತಿಶ್ವರಿ ಆಂಧ್ರಪ್ರದೇಶದ ಡಿಜಿಪಿ ಹರೀಶ್ ಕುಮಾರ್ ಅವರ ಎದುರು ಶರಣಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
‘ಕಮಲೇಶ್ ಹೆಸರಿನಿಂದ ನಾಗರಾಜು 34 ವರ್ಷಗಳಿಂದ ನಕ್ಸಲ್ ಚಟುವಟಿಕೆ ನಡೆಸುತ್ತಿದ್ದ. ಬಸ್ತಾರ್ ಪೂರ್ವ ವಿಭಾಗದ ಉಸ್ತುವಾರಿ ಆಗಿಯೂ, ದಂಡಕಾರಣ್ಯ ವಿಶೇಷ ವಲಯ ಸಮಿತಿಯ ಭಾಗವಾಗಿದ್ದನು’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪೋಲಿಸರು ತಿಳಿಸಿದ್ದಾರೆ.
ಈ ದಂಪತಿ ಛತ್ತೀಸಗಢದ ಸಕ್ಸಲ್ ಚಟುವಟಿಕೆಯಲ್ಲಿಯೂ ಭಾಗಿಯಾಗಿದ್ದರು. ನಾಗರಾಜು ಮತ್ತು ಜ್ಯೋತಿಶ್ವರಿ ಅವರ ಸುಳಿವು ನೀಡಿದವರಿಗೆ ಸರ್ಕಾರ ಕ್ರಮವಾಗಿ ₹20 ಲಕ್ಷ ಹಾಗೂ ₹5 ಲಕ್ಷ ಬಹುಮಾನ ಘೋಷಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.