ADVERTISEMENT

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಆಡಳಿತದಲ್ಲಿ ಒಂದೇ ಸಮುದಾಯದವರ ಪ್ರಾಬಲ್ಯ: BJP ಶಾಸಕ

ಪಿಟಿಐ
Published 3 ಜನವರಿ 2025, 6:29 IST
Last Updated 3 ಜನವರಿ 2025, 6:29 IST
<div class="paragraphs"><p>ಮಹಾರಾಷ್ಟ್ರ&nbsp;ಬಿಜೆಪಿ ಶಾಸಕ ಸುರೇಶ್‌ ದಾಸ್‌</p></div>

ಮಹಾರಾಷ್ಟ್ರ ಬಿಜೆಪಿ ಶಾಸಕ ಸುರೇಶ್‌ ದಾಸ್‌

   

ಚಿತ್ರಕೃಪೆ: X / @SureshDhasBJP

ಮುಂಬೈ: ಮಹಾರಾಷ್ಟ್ರದ ಬೀಡ್‌ ಜಿಲ್ಲೆಯಲ್ಲಿನ ಸರ್ಕಾರಿ ನೌಕರಿಗಳಲ್ಲಿ ಒಂದೇ ಸಮುದಾಯದವರ ಪ್ರಾಬಲ್ಯವಿದೆ. ಇದರಿಂದಾಗಿ, ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಭಾವ ಇತರ ಸಮುದಾಯದವರಲ್ಲಿ ಮೂಡುತ್ತಿದೆ ಎಂದು ಬಿಜೆಪಿ ಶಾಸಕ ಸುರೇಶ್‌ ದಾಸ್‌ ಹೇಳಿದ್ದಾರೆ.

ADVERTISEMENT

ಮಾಧ್ಯಮದವರೊಂದಿಗೆ ಮಾತನಾಡಿರುವ ಶಾಸಕ, ಯಾವ ಸಮುದಾಯ ಎಂಬುದನ್ನು ನಿರ್ದಿಷ್ಟವಾಗಿ ಹೇಳಿಲ್ಲ.

'ಬೀಡ್‌ ಜಿಲ್ಲೆಯಲ್ಲಿರುವ ಸರ್ಕಾರಿ ನೌಕರಿಗಳ ಪೈಕಿ, ಪ್ರಮುಖ ಎನಿಸುವ ಹೆಚ್ಚಿನ ಹುದ್ದೆಗಳಲ್ಲಿ ಒಂದೇ ಸಮುದಾಯದ ಅಧಿಕಾರಿಗಳು ಇದ್ದಾರೆ. ಸರ್ಕಾರವು ಒಂದು ಚೌಕಟ್ಟನ್ನು ಅನುಸರಿಸಬೇಕಾಗುತ್ತದೆ. ಆದರೆ, ಒಂದೇ ಸಮುದಾಯದ ಅಧಿಕಾರಿಗಳು ಅತಿಯಾಗಿ ಒಂದೇ ಕಡೆ ಇರುವುದು, ಆ ಚೌಕಟ್ಟು ಇಲ್ಲಿ ಪಾಲನೆಯಾಗುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ' ಎಂದು ಟೀಕಿಸಿದ್ದಾರೆ.

ಕಳೆದ ತಿಂಗಳು ಮಸ್ಸಜೊಗ್‌ ಸರಪಂಚ್‌ ಸಂತೋಷ್‌ ದೇಶಮುಖ್‌ ಅವರ ಕೊಲೆಯಾಗಿತ್ತು. ಆ ಪ್ರಕರಣದ ಹಿನ್ನೆಲೆಯಲ್ಲಿ ದಾಸ್‌ ಅವರು ಇಂತಹ ಹೇಳಿಕೆ ನೀಡಿದ್ದಾರೆ. ದೇಶಮುಖ್‌ ಅವರು ಮರಾಠ ಸಮುದಾಯಕ್ಕೆ ಸೇರಿದವರು. ಕೊಲೆ ಆರೋಪಿಗಳು ವಂಜಾರಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ದೇಶಮುಖ್‌ ಕೊಲೆ ಪ್ರಕರಣದಲ್ಲಿ ಎನ್‌ಸಿಪಿ ನಾಯಕ ಹಾಗೂ ಸಚಿವ ಧನಂಜಯ್‌ ಮುಂಡೆ ಅವರ ಸಹಾಯಕ ವಾಲ್ಮಿಕ್‌ ಕರಾಡ್‌ ಅವರ ಪಾತ್ರವಿದೆ ಎಂದು ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪದ ಕುರಿತು ಕೇಳಿದ್ದಕ್ಕೆ, 'ನಾನು ಅವರ (ಧನಂಜಯ ಮುಂಡೆ) ಹೆಸರನ್ನು ಪ್ರಸ್ತಾಪಿಸಿಲ್ಲ ಅಥವಾ ಅವರ ರಾಜೀನಾಮೆ ಕೇಳಿಲ್ಲ' ಎಂದಿದ್ದಾರೆ.

ಡಿಸೆಂಬರ್‌ 31ರಂದು ಕರಾಡ್‌ ಬಂಧನವಾದ ಬಳಿಕ ರಾಜ್ಯವನ್ನು ಪ್ರತಿನಿಧಿಸಲು ನಿರಾಕರಿಸಿರುವ ಬೀಡ್‌ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರನ್ನು ತೆರವು ಮಾಡುವಂತೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರಿಗೆ ಪತ್ರ ಬರೆದಿರುವುದಾಗಿಯೂ ಬಿಜೆಪಿ ಶಾಸಕ ತಿಳಿಸಿದ್ದಾರೆ.

'ದೇಶಮುಖ್‌ ಕೊಲೆ ಹಾಗೂ ಸುಲಿಗೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವವರು ಪ್ರಭಾವ ಬೀರುವ ಸಾಧ್ಯತೆ ಇದೆ. ಹಾಗಾಗಿ, ಅವರನ್ನು ಬೀಡ್‌ನಲ್ಲಿ ಸೆರೆಯಲ್ಲಿರಿಸದಂತೆ ಒತ್ತಾಯಿಸುತ್ತೇನೆ. ಆರೋಪಿಗಳನ್ನು ಛತ್ರಪತಿ ಸಂಭಾಜಿನಗರದ ಹರ್ಸುಲ್‌ ಜೈಲಿಗೆ ಅಥವಾ ನಾಸಿಕ್‌ ಜೈಲಿಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸುತ್ತೇನೆ' ಎಂದಿದ್ದಾರೆ.

ಬೀಡ್‌ನಲ್ಲಿ ಸಂಸದರಾಗಿರುವ ಎನ್‌ಸಿಪಿ (ಶರದ್‌ಚಂದ್ರ) ಪಕ್ಷದ ಬಜರಂಗ್‌ ಸೋನವಾನೆ ಅವರು, ಸುಲಿಗೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ಪ್ರಕರಣ ದಾಖಲಾದ ಮರುದಿನ ಕರಾಡ್‌ ಅವರು ಧನಂಜಯ್ ಮುಂಡೆ ಅವರ ಕಚೇರಿಯಲ್ಲಿ ಕಾಣಿಸಿಕೊಂಡಿದ್ದರು ಎಂದು ಆರೋಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸುರೇಶ್‌ ದಾಸ್‌, 'ಆ ಬಗ್ಗೆ ನನ್ನಲ್ಲಿ ಯಾವುದೇ ಮಾಹಿತಿಇಲ್ಲ. ಆದರೆ, ಅದೇನಾದರು ಸತ್ಯವಾಗಿದ್ದರೆ, ಸಚಿವರು (ಧನಂಜಯ ಮುಂಡೆ) ರಾಜೀನಾಮೆ ನೀಡಬೇಕು' ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.