ADVERTISEMENT

ಮಾಜಿ ಸಚಿವ, ಮೀಟೂ ಪ್ರಕರಣದ ಆರೋಪಿ ಎಂಜೆ ಅಕ್ಬರ್ ಕೂಡಾ ಚೌಕೀದಾರ್!

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 6:39 IST
Last Updated 19 ಮಾರ್ಚ್ 2019, 6:39 IST
   

ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರ ಚೌಕೀದಾರ್ ಅಭಿಯಾನದಲ್ಲಿ ಭಾಗಿಯಾದ ಮಾಜಿ ಸಚಿವ, ಮೀಟೂ ಪ್ರಕರಣದ ಆರೋಪಿ ಎಂಜೆ ಅಕ್ಬರ್ ಭಾನುವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಚೌಕೀದಾರ್ ಎಂದು ಸೇರಿಸಿದ್ದರು.ತಮ್ಮ ಹೆಸರಿನ ಜತೆ ಚೌಕೀದಾರ್ ಎಂಬ ಉಪಸರ್ಗ (prefix) ಸೇರಿಸಿದ್ದಕ್ಕಾಗಿ ಟ್ವೀಟಿಗರು ಅಕ್ಬರ್ ಅವರನ್ನು ಟ್ರೋಲ್ ಮಾಡಿದ್ದರು.

ಚೌಕೀದಾರ್ ಅಕ್ಬರ್‌ನ್ನು ಟ್ರೋಲ್ ಮಾಡಿದ ನಟಿ ರೇಣುಕಾ ಶಹಾನೆ, ನೀವು ಚೌಕೀದಾರ್ ಆದರೆ ಯಾವ ಮಹಿಳೆಯೂ ಸುರಕ್ಷಿತರಾಗಿರುವುದಿಲ್ಲ ಎಂದು ಟ್ವೀಟಿಸಿದ್ದರು. ಟ್ರೋಲ್‍ಗೊಳಗಾದನಂತರ ಎಂ.ಜೆ ಅಕ್ಬರ್ ಚೌಕೀದಾರ್ ಕೈಬಿಟ್ಟು ಎಂಜೆ ಅಕ್ಬರ್ ಆದರು.ಇದೀಗ ಅವರು ಮತ್ತೆ ಚೌಕೀದಾರ್ ಎಂ.ಜೆ ಅಕ್ಬರ್ ಆಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಚೌಕೀದಾರ್ ಅಭಿಯಾನಕ್ಕೆ ಬೆಂಬಲ ಸೂಚಿಸಿದ ಅಕ್ಬರ್, #MainBhiChowkidar ಅಭಿಯಾನದಲ್ಲಿ ಭಾಗವಹಿಸಲು ನಾನು ಹೆಮ್ಮೆ ಪಡುತ್ತೇನೆ.ದೇಶವನ್ನು ಪ್ರೀತಿಸುವ ಪ್ರಜೆಗಳು ದೇಶದಲ್ಲಿನ ಭ್ರಷ್ಟಾಚಾರ, ಕೊಳೆ, ಬಡತನ ಮತ್ತು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಿ ಸುರಕ್ಷಿತ, ಸುದೃಢ ಮತ್ತು ಪ್ರಗತಿಪರ ನವ ಭಾರತ ನಿರ್ಮಾಣ ಮಾಡಲು ನಾನು ನನ್ನಿದಂದಾದ ಕಾರ್ಯ ಮಾಡುತ್ತೇನೆ ಎಂದಿದ್ದಾರೆ.

ADVERTISEMENT

ಅಕ್ಬರ್ ಮೇಲಿನ ಮೀಟೂಆರೋಪ ಏನು?
ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಬಗ್ಗೆ ಪತ್ರಕರ್ತೆ ಪ್ರಿಯಾ ರಮಣಿ ಅವರು ವೋಗ್‌ ಇಂಡಿಯಾದಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಲೇಖನವೊಂದನ್ನು ಬರೆದಿದ್ದರು. ಆದರೆ, ಅದರಲ್ಲಿ ಎಲ್ಲಿಯೂ ಅಕ್ಬರ್ ಹೆಸರನ್ನು ಉಲ್ಲೇಖಿಸಿರಲಿಲ್ಲ. ಆನಂತರಟ್ವೀಟ್ ಮಾಡಿದ್ದ ಅವರು, ‘ಎಂಜೆ ಅಕ್ಬರ್ ಕತೆಯೊಂದಿಗೆ ಇದನ್ನು ಆರಂಭಿಸುತ್ತೇನೆ. ಆದರೆ ಅವರ ಹೆಸರನ್ನು ಉಲ್ಲೇಖಿಸಿಲ್ಲ; ಯಾಕೆಂದರೆ ಅವರೇನೂ ‘ಮಾಡಿಲ್ಲ’. ಈ ಬೇಟೆಗಾರನಿಂದ ಅನೇಕ ಮಹಿಳೆಯರಿಗೆ ಕೆಟ್ಟ ಅನುಭವ ಆಗಿರಬಹುದು. ಬಹುಶಃ ಅವರದನ್ನು ಹಂಚಿಕೊಳ್ಳಬಹುದು’ ಎಂದು ಬರೆದಿದ್ದರು. ಇದಾದ ನಂತರ ಹಲವು ಪತ್ರಕರ್ತೆಯರು ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ವಿದೇಶಾಂಗ ಖಾತೆಯ ರಾಜ್ಯ ಸಚಿವ ಎಂ.ಜೆ. ಅಕ್ಬರ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.