ADVERTISEMENT

ರೂಪದರ್ಶಿ ತಾನಿಯಾ ಸಿಂಗ್ ಸಾವು ಪ್ರಕರಣ: ಕ್ರಿಕೆಟಿಗ ಅಭಿಷೇಕ್ ಶರ್ಮಾಗೆ ನೋಟಿಸ್‌

ಪಿಟಿಐ
Published 21 ಫೆಬ್ರುವರಿ 2024, 14:28 IST
Last Updated 21 ಫೆಬ್ರುವರಿ 2024, 14:28 IST
<div class="paragraphs"><p>ಅಭಿಷೇಕ್ ಶರ್ಮಾ</p></div>

ಅಭಿಷೇಕ್ ಶರ್ಮಾ

   

ಇನ್‌ಸ್ಟಾಗ್ರಾಮ್

ಸೂರತ್: ರೂಪದರ್ಶಿ ತಾನಿಯಾ ಸಿಂಗ್ ಸಾವಿನ ಪ್ರಕರಣ ಸಂಬಂಧ ಕ್ರಿಕೆಟಿಗ ಅಭಿಷೇಕ್ ಶರ್ಮಾಗೆ ತನಿಖೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ADVERTISEMENT

ತಾನಿಯಾ ಸಿಂಗ್ ( 28) ಮೃತದೇಹವು ನೇಣು ಬೀಗಿದ ಸ್ಥಿತಿಯಲ್ಲಿ ಸೋಮವಾರ (ಫೆ.19) ಕಂಡು ಬಂದಿತ್ತು. ಪೊಲೀಸರು ಆತ್ಮಹತ್ಯೆ ಇರಬಹುದು ಎಂದು ಶಂಕಿಸಿದ್ದಾರೆ. ಆದರೆ ಈವರೆಗೂ ಡೇಟ್‌ ನೋಟ್‌ ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಗರದ ವೆಸುವಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ತಾನಿಯಾ ಸಿಂಗ್ ವಾಸವಾಗಿದ್ದರು. ತಾನಿಯಾ ಹಾಗೂ ಕ್ರಿಕೆಟಿಗ ಅಭಿಷೇಕ್ ಇಬ್ಬರು ಸ್ನೇಹಿತರಾಗಿದ್ದರು ಎಂಬುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾನಿಯಾ ವಾಟ್ಸ್‌ಆ್ಯಪ್‌ನಲ್ಲಿ ಹಲವು ಬಾರಿ ಅಭಿಷೇಕ್‌ಗೆ ಮೆಸೇಜ್‌ಗಳನ್ನು ಕಳುಹಿಸಿದ್ದಾರೆ. ಆದರೆ, ಅಭಿಷೇಕ್ ಮೆಸೇಜ್‌ಗಳಿಗೆ ಯಾವುದೇ ಪತ್ರಿಕ್ರಿಯೆ ನೀಡಿರಲಿಲ್ಲ ಎನ್ನುವ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾವು ಈವರೆಗೂ ಅಭಿಷೇಕ್ ಅವರನ್ನು ಸಂಪರ್ಕಿಸಿಲ್ಲ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ. ಪೊಲೀಸರು ತಾನಿಯಾ ಅವರ ಮೊಬೈಲ್‌ನ ಕಾಲ್ ಡಿಟೇಲ್ ರೆಕಾರ್ಡ್( ಸಿಡಿಆರ್ ) ಮತ್ತು ಐಪಿ ಡಿಟೇಲ್ ರೆಕಾರ್ಡ್ (ಐಪಿಡಿಆರ್) ಡೇಟಾವನ್ನು ಪರಿಶೀಲಿಸುತ್ತಿದ್ದಾರೆ. ತನಿಖೆ ಬಳಿಕ ಸತ್ಯ ಹೊರ ಬೀಳಲಿದೆ ಎಂದು ‌ಸಹಾಯಕ ಪೊಲೀಸ್ ಆಯುಕ್ತ ವಿಆರ್ ಮಲ್ಹೋತ್ರಾ ಹೇಳಿದ್ದಾರೆ.

ಅಭಿಷೇಕ್ ಶರ್ಮಾ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.