ADVERTISEMENT

ಅದಾನಿ, ಚೀನಾಗೆ ಮೋದಿ ಶರಣು: ಕಾಂಗ್ರೆಸ್‌ ಟೀಕೆ

ಪಿಟಿಐ
Published 5 ಜೂನ್ 2025, 15:19 IST
Last Updated 5 ಜೂನ್ 2025, 15:19 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ </p></div>

ಪ್ರಧಾನಿ ನರೇಂದ್ರ ಮೋದಿ

   

ನವದೆಹಲಿ: ‌ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕೆ ಮುಂದುವರಿಸಿರುವ ಕಾಂಗ್ರೆಸ್‌, ‘ಮೋದಿ ಅವರು ಕೋಟ್ಯಧಿಪತಿ ಗೌತಮ್‌ ಅದಾನಿ ಮತ್ತು ಚೀನಾ ವಿರುದ್ಧ ಶರಣಾಗಿದ್ದಾರೆ’ ಎಂದು ಗುರುವಾರ ವಾಗ್ದಾಳಿ ಮಾಡಿದೆ.

ಮೋದಿ ಅವರು ಎಲ್ಲಿಗೇ ಹೋದರು ಉದ್ಯಮಿ ಅದಾನಿ ಅವರು ಬಯಸಿದ್ದನ್ನು ಮಾಡುವ ಮೂಲಕ ಅವರ ಹಿತ ಕಾಯುತ್ತಾರೆ.  ಅವರು ತಮ್ಮ ಈ ಗೆಳೆಯನಿಗೆ ಬಂದರುಗಳು, ವಿಮಾನ ನಿಲ್ದಾಣಗಳು, ವಿದ್ಯುತ್‌, ಕಲ್ಲಿದ್ದಲು ಗಣಿಗಾರಿಕೆ ಮತ್ತು ಶಸ್ತ್ರಾಸ್ತ್ರಗಳ ಉದ್ಯಮದಲ್ಲಿ ಜಾಗತಿಕವಾಗಿ ವ್ಯಾಪಾರ ವಿಸ್ತರಿಸಲು ನೆರವಾಗಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಅಜೋಯ್‌ ಕುಮಾರ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ADVERTISEMENT

ಕಾಂಗ್ರೆಸ್‌ನ ಈ ಆರೋಪಗಳಿಗೆ ಸರ್ಕಾರ ಅಥವಾ ಅದಾನಿ ಗ್ರೂಫ್‌ನಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.