ADVERTISEMENT

ಮಹಾ ಕುಂಭಮೇಳ | 7,000 ಮಹಿಳೆಯರಿಂದ ಸನ್ಯಾಸ ದೀಕ್ಷೆ; ವಿದ್ಯಾವಂತರೇ ಅಧಿಕ!

ಪಿಟಿಐ
Published 10 ಫೆಬ್ರುವರಿ 2025, 4:14 IST
Last Updated 10 ಫೆಬ್ರುವರಿ 2025, 4:14 IST
<div class="paragraphs"><p>ಮಹಾ ಕುಂಭಮೇಳ</p></div>

ಮಹಾ ಕುಂಭಮೇಳ

   

ಪಿಟಿಐ

ಮಹಾಕುಂಭ ನಗರ (ಉತ್ತರ ಪ್ರದೇಶ): ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಮೇಳದಲ್ಲಿ ಸುಮಾರು 7,000ಕ್ಕೂ ಹೆಚ್ಚು ಮಹಿಳೆಯರು ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ. ಈ ಪೈಕಿ ವಿದ್ಯಾವಂತ ಮಹಿಳೆಯರೇ ಹೆಚ್ಚು ಎನ್ನುವುದು ವಿಶೇಷ.

ADVERTISEMENT

ಜುನಾ ಅಖಾರಾದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿ, ಶ್ರೀ ಪಂಚದಶನಮ್ ಆವಾಹನ ಅಖಾರಾದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅರುಣ್ ಗಿರಿ ಮತ್ತು ವೈಷ್ಣವ ಸಂತರ ಧರ್ಮಾಚಾರ್ಯರ ನೇತೃತ್ವದಲ್ಲಿ ಮಹಿಳೆಯರು ದೀಕ್ಷೆ ಸ್ವೀಕರಿಸಿದ್ದಾರೆ ಎಂದು ಉತ್ತರ ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

ಎಲ್ಲಾ ಪ್ರಮುಖ ಅಖಾರಾಗಳಲ್ಲಿ 7,000ಕ್ಕೂ ಹೆಚ್ಚು ಮಹಿಳೆಯರು 'ಗುರು ದೀಕ್ಷೆ' ಪಡೆದು ಸನಾತನ ಧರ್ಮಕ್ಕೆ ಸೇವೆ ಸಲ್ಲಿಸುವುದಾಗಿ ಪ್ರತಿಜ್ಞೆ ಮಾಡಿದರು.

ಈ ಬಾರಿಯ ಮಹಾಕುಂಭದಲ್ಲಿ 246 ಮಹಿಳೆಯರು ನಾಗ ಸನ್ಯಾಸಿನಿಯಾಗಿ ದೀಕ್ಷೆ ಪಡೆದುಕೊಂಡಿದ್ದಾರೆ ಎಂದು ಶ್ರೀ ಪಂಚದಶನಂ ಜುನಾ ಅಖಾರಾದ ಅಧ್ಯಕ್ಷೆ ಡಾ.ದೇವಯಾ ಗಿರಿ ಹೇಳಿದ್ದಾರೆ.

2019ರ ಕುಂಭಮೇಳದಲ್ಲಿ 210 ಮಹಿಳೆಯರಿಗೆ ನಾಗ ಸನ್ಯಾಸಿನಿ ದೀಕ್ಷೆ ನೀಡಲಾಯಿತು ಎಂದು ದೇವಯಾ ತಿಳಿಸಿದ್ದಾರೆ.

ಈ ಬಾರಿಯ ಮಹಾಕುಂಭಮೇಳಕ್ಕೆ ಬರುವ 10 ಮಂದಿಯ ಪೈಕಿ ನಾಲ್ವರು ಮಹಿಳೆಯಾಗಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.