ADVERTISEMENT

ಮಹಾಕುಂಭ ಮೇಳ: ಸಂಗಮದಲ್ಲಿ ಮುಳುಗೆದ್ದ ಅಂಬಾನಿ ಕುಟುಂಬ

ಪಿಟಿಐ
Published 11 ಫೆಬ್ರುವರಿ 2025, 13:52 IST
Last Updated 11 ಫೆಬ್ರುವರಿ 2025, 13:52 IST
<div class="paragraphs"><p>ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ ಅಂಬಾನಿ ಕುಟುಂಬ</p></div>

ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ ಅಂಬಾನಿ ಕುಟುಂಬ

   

ಮಹಾಕುಂಭ ನಗರ: ರಿಲಾಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು ಕುಟುಂಬ ಸಮೇತ ಮಹಾಕುಂಭ ಮೇಳಕ್ಕೆ ಭೇಟಿ ನೀಡಿ ಸಂಗಮದಲ್ಲಿ ಮುಳುಗೆದ್ದು ಪುಣ್ಯ ಸ್ನಾನ ಮಾಡಿದ್ದಾರೆ.

ಕುಂಭ ಮೇಳದ ಭೇಟಿ ವೇಳೆ ಅಂಬಾನಿ ಕುಟುಂಬ ಪರಮತೀರ್ಥ ತ್ರಿವೇಣಿ ಪುಷ್ಪ ಆಶ್ರಮದಲ್ಲಿ ನಡೆದ ಯಜ್ಞದಲ್ಲಿ ಪಾಲ್ಗೊಂಡಿತ್ತು.

ADVERTISEMENT

ಈ ಕುರಿತು ಆಶ್ರಮ ಹೇಳಿಕೆ ಬಿಡುಗಡೆ ಮಾಡಿದ್ದು, ಮುಕೇಶ್‌ ಅಂಬಾನಿ, ಅವರ ತಾಯಿ ಕೊಕಿಲಾ ಬೆನ್‌ ಅಂಬಾನಿ, ಶ್ಲೋಕ ಅಂಬಾನಿ, ಅನಂತ ಅಂಬಾನಿ ದಂಪತಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಸ್ವಾಮಿ ಚಿದಾನಂದ ಸರಸ್ವತಿ ಅವರ ನೇತೃತ್ವದಲ್ಲಿ ನಡೆದ ಯಜ್ಞದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಿದೆ.

ಇದೇ ವೇಳೆ, ಸ್ವಚ್ಛತಾ ಕೆಲಸ ಮಾಡುವವರಿಗೆ ಮತ್ತು ದೋಣಿ ನಡೆಸುವವರಿಗೆ ಅಂಗವಸ್ತ್ರ, ಸಿಹಿ ತಿಂಡಿ, ಹಣ್ಣು, ಸ್ವಚ್ಛತಾ ಕಿಟ್‌ ಸೇರಿ ಹಲವು ಉಡುಗೊರೆಗಳನ್ನು ನೀಡಿದ್ದಾರೆ.

ಆಶ್ರಮದಲ್ಲಿ ಜಗತ್ತಿನ ಶಾಂತಿ ಮತ್ತು ಒಳಿತಿಗಾಗಿ ನಡೆದ ವಿಶ್ವ ಶಾಂತಿ ಯಜ್ಞದಲ್ಲಿ ಮುಕೇಶ್‌ ಅವರ ಕುಟುಂಬ ಪಾಲ್ಗೊಂಡಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.