ADVERTISEMENT

ಮಹಾರಾಷ್ಟ್ರ: ನಗರ ಪಾಲಿಕೆ ಮತ ಎಣಿಕೆ ಚುರುಕು; ಮಹಾಯುತಿಗೆ ಆರಂಭಿಕ ಮುನ್ನಡೆ

ಪಿಟಿಐ
Published 16 ಜನವರಿ 2026, 5:34 IST
Last Updated 16 ಜನವರಿ 2026, 5:34 IST
<div class="paragraphs"><p>ಮತ ಎಣಿಕೆ</p></div>

ಮತ ಎಣಿಕೆ

   

(ಪಿಟಿಐ ಚಿತ್ರ)

ಮುಂಬೈ: ಮಹಾರಾಷ್ಟ್ರದ 29 ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಶುಕ್ರವಾರ ಬೆಳಿಗ್ಗೆ ಆರಂಭವಾಗಿದೆ. ಬಿಜೆಪಿ ನೇತೃತ್ವದ ಮಹಾಯುತಿ ಆರಂಭಿಕ ಮುನ್ನಡೆ ಸಾಧಿಸಿದೆ. ಮುಂಬೈ ಅನ್ನು ಯಾವ ಪಕ್ಷ ಗೆಲ್ಲಲಿದೆ ಎಂಬ ಕುತೂಹಲ ಮನೆಮಾಡಿದೆ.

ADVERTISEMENT

ದೇಶದ ಶ್ರೀಮಂತ ಮಹಾನಗರ ಪಾಲಿಕೆ ಹೊಂದಿರುವ ಮುಂಬೈ ಅನ್ನು ಗೆಲ್ಲಲು ಬಿಜೆಪಿ ನೇತೃತ್ವದ ಮಹಾಯುತಿ ಹಾಗೂ ಅನೇಕ ವರ್ಷಗಳ ಬಳಿಕ ಒಂದಾಗಿರುವ ಠಾಕ್ರೆ ಸಹೋದರರ ನಡುವೆ ತೀವ್ರ ಪೈಪೋಟಿ ಉಂಟಾಗಿದೆ.

ಮುಂಬೈನ 227 ವಾರ್ಡ್‌ಗಳು ಸೇರಿ, ಮಹಾರಾಷ್ಟ್ರದ 893 ಪುರಸಭೆ ವಾರ್ಡ್‌ಗಳ 2,869 ಸ್ಥಾನಗಳಿಗೆ ಗುರುವಾರ ಮತದಾನ ನಡೆದಿದೆ. 29 ಮಹಾನಗರ ಪಾಲಿಕೆಗಳಿಂದ ಒಟ್ಟು 15,931 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ 3.48 ಕೋಟಿ ಅರ್ಹ ಮತದಾರರಿದ್ದಾರೆ.

29 ನಗರ ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ, ಸುಮಾರು ಶೇ 50ರಷ್ಟು ಮತದಾನ ನಡೆದಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ದಿನೇಶ್ ವಾಘ್ಮೋರೆ ಮತದಾನದ ನಂತರ ತಿಳಿಸಿದ್ದಾರೆ.

₹74,400 ಕೋಟಿಗೂ ಅಧಿಕ ಮೊತ್ತದ ವಾರ್ಷಿಕ ಬಜೆಟ್ ಹೊಂದಿರುವ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC)ಗೆ, ಸದಸ್ಯರ ಅಧಿಕಾರ ಅವಧಿ ಮುಗಿದು 4 ವರ್ಷಗಳ ಬಳಿಕ ಚುನಾವಣೆ ನಡೆಯಿತ್ತಿದೆ. 227 ಸ್ಥಾನಗಳಿಗೆ 1,700 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸದ್ಯ ಮುಂಬೈನಲ್ಲಿ ಬಿಜೆಪಿ ಬೆಂಬಲಿತ ಮಹಾಯುತಿ ಮುನ್ನಡೆ ಸಾಧಿಸಿದೆ.

ಮುಂಬೈನ 227 ಸ್ಥಾನಗಳಲ್ಲಿ ಬಿಜೆಪಿ 23, ಕಾಂಗ್ರೆಸ್ 3, ಶಿವಸೇನಾ ಉದ್ದವ್ ಠಾಕ್ರೆ ಬಣ 14 ಸ್ಥಾನಗಳಲ್ಲಿ ಆರಂಭಿಕ ಮುನ್ನಡೆ ಸಾಧಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.