ನವದೆಹಲಿ: ‘ತೃಣಮೂಲ ಕಾಂಗ್ರೆಸ್‌ಗೆ(ಟಿಎಂಸಿ) ಬೇಷರತ್ತಾಗಿ ಸೇರ್ಪಡೆಯಾಗಿದ್ದೇನೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ನೀಡುವ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಲು ನಾನು ಸಿದ್ಧ’ ಎಂದು ಸುಶ್ಮಿತಾ ದೇವ್ ಅವರು ಮಂಗಳವಾರ ಹೇಳಿದರು.
ಟಿಎಂಸಿಯ ಹಿರಿಯ ನಾಯಕರಾದ ಅಭಿಷೇಕ್ ಬ್ಯಾನರ್ಜಿ ಮತ್ತು ಡೆರೆಕ್ ಒ ಬ್ರಿಯನ್ ಅವರ ಉಪಸ್ಥಿತಿಯಲ್ಲಿ ಕೋಲ್ಕತ್ತದಲ್ಲಿ ಸುಶ್ಮಿತಾ ಅವರು ಸೋಮವಾರ ಟಿಎಂಸಿಗೆ ಸೇರಿದ್ದರು.
‘ಟಿಎಂಸಿಗೆ ಸೇರುವಾಗ ಯಾವುದೇ ಸಿದ್ಧಾಂತವನ್ನು ನಾನು ರಾಜಿ ಮಾಡಿಕೊಂಡಿಲ್ಲ. ನಾನು ಬೇಷರತ್ತಾಗಿ ಟಿಎಂಸಿಗೆ ಸೇರ್ಪಡೆಯಾಗಿದ್ದೇನೆ. ನನ್ನ 30 ವರ್ಷದ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮುಂದೆ ಯಾವುದೇ ಬೇಡಿಕೆ ಇಟ್ಟಿಲ್ಲ ’ ಎಂದು ವರದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.