ಪ್ರಧಾನಿ ಮೋದಿಗೆ ಶುಭ ಕೋರಿ ಮಕ್ಕಳು ತಯಾರಿಸಿದ ಶುಭಾಶಯ ಪತ್ರಗಳನ್ನು ದೆಹಲಿ ಸಿಎಂ ರೇಖಾ ಗುಪ್ತಾ ಕಲೆಹಾಕಿದರು
ಚಿತ್ರ ಕೃಪೆ: gupta_rekha
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಕ್ಕೆ ಶುಭಕೋರಿದ ಹಾಡನ್ನು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಬಿಡುಗಡೆ ಮಾಡಿದ್ದಾರೆ.
ನಾಳೆ (ಸೆ.17) ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವಾಗಿದೆ.
‘ನಮೋ ಪ್ರಗತಿ ದಿಲ್ಲಿ– ಬಾಲ್ ಸ್ವರ್ ಸೇ ರಾಷ್ಟ್ರ ಸ್ವರ್ ತಕ್’ ಎನ್ನುವ ಹಾಡನ್ನು ದೆಹಲಿಯ ಶಿಕ್ಷಣ ಇಲಾಖೆ ರಚಿಸಿದೆ. 21 ವಿದ್ಯಾರ್ಥಿಗಳು ಈ ಹಾಡನ್ನು ಹಾಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗುಪ್ತಾ, ‘ದೆಹಲಿಯ ಜೀವರಕ್ಷಕರಂತೆ ಪ್ರಧಾನಿ ಮೋದಿ ಕೆಲಸ ಮಾಡಿದ್ದಾರೆ. ಆದರೂ ಈ ಹಿಂದೆ ಇದ್ದ ಸರ್ಕಾರ ಅವರನ್ನು ನಿರಂತರವಾಗಿ ಟೀಕಿಸಿದೆ. ಇಂದು ನಮ್ಮ ಸರ್ಕಾರ ಮೋದಿಯವರಿಗೆ ಹೃದಯಪೂರ್ವಕವಾಗಿ ಕೃತಜ್ಞತೆ ಹೇಳುತ್ತದೆ’ ಎಂದಿದ್ದಾರೆ.
ಮೋದಿ ಅವರ ಹುಟ್ಟುಹಬ್ಬಕ್ಕೆ ಶುಭಕೋರಿ ಅನೇಕ ಮಕ್ಕಳು ಶುಭಾಶಯ ಪತ್ರಗಳನ್ನು ತಯಾರಿಸಿದ್ದಾರೆ, ಅವುಗಳನ್ನು ಪ್ರಧಾನಿಯವರಿಗೆ ಕಳುಹಿಸುತ್ತೇನೆ. ಹಾಡಿನ ಮೂಲಕ ಅವರಿಗೆ ಶುಭಾಶಯ ಕೋರಿರುವುದನ್ನು ಖಂಡಿತ ಮೆಚ್ಚಿಕೊಳ್ಳುತ್ತಾರೆ ಎಂದು ಹೇಳಿದರು.
ಪ್ರಧಾನಿ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೆಹಲಿ ಸರ್ಕಾರ ಬುಧವಾರ ಬೆಳಿಗ್ಗೆ 7 ಗಂಟೆಗೆ ಕರ್ತವ್ಯಪಥದಲ್ಲಿ ವಿಶೇಷ ಸೇವಾ ನಡಿಗೆಯನ್ನು ಆಯೋಜಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.