ADVERTISEMENT

ಇನ್‌ಸ್ಟಾದಲ್ಲಿ 10 ಕೋಟಿ ಫಾಲೋವರ್ಸ್: ವಿಶ್ವದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಮೋದಿ

ಏಜೆನ್ಸೀಸ್
Published 26 ಫೆಬ್ರುವರಿ 2026, 2:20 IST
Last Updated 26 ಫೆಬ್ರುವರಿ 2026, 2:20 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

–ಪಿಟಿಐ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ (10 ಕೋಟಿ) ಫಾಲೋವರ್‌ಗಳನ್ನು ಹೊಂದುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ್ದಾರೆ. ಈ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ವಿಶ್ವದ ಮೊದಲ ನಾಯಕ ಮತ್ತು ರಾಜಕಾರಣಿಯಾಗಿದ್ದಾರೆ.

ADVERTISEMENT

2014ರಲ್ಲಿ ಪ್ರಧಾನಿ ಮೋದಿ ಇನ್‌ಸ್ಟಾಗ್ರಾಮ್‌ ಖಾತೆ ತೆರೆದಿದ್ದರು. ಇದೀಗ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗಿಂತ ಎರಡು ಪಟ್ಟು ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ. ಉಳಿದ ಐದು ಪ್ರಮುಖ ವಿಶ್ವ ನಾಯಕರ ಒಟ್ಟು ಫಾಲೋವರ್‌ಗಳ ಸಂಖ್ಯೆ ಮೋದಿ ಅವರ ವೈಯಕ್ತಿಕ ಫಾಲೋವರ್‌ಗಳ ಸಂಖ್ಯೆಗಿಂತ ಕಡಿಮೆ ಇದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 43.2 ಮಿಲಿಯನ್ (4.32 ಕೋಟಿ) ಫಾಲೋವರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಅವರ ನಂತರ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ 15 ಮಿಲಿಯನ್ (1.50 ಕೋಟಿ), ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾಡ ಸಿಲ್ವಾ 14.4 ಮಿಲಿಯನ್ (1.44 ಕೋಟಿ), ಟರ್ಕಿ ಅಧ್ಯಕ್ಷ ಎರ್ಡೋಗನ್‌ 11.6 ಮಿಲಿಯನ್ (1.11 ಕೋಟಿ), ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೆ 6.4 ಮಿಲಿಯನ್ (64 ಲಕ್ಷ) ಫಾಲೋವರ್‌ಗಳನ್ನು ಹೊಂದಿದ್ದಾರೆ.

ಇದಲ್ಲದೆ, ಭಾರತದೊಳಗೂ ಫಾಲೋವರ್‌ಗಳ ಸಂಖ್ಯೆಯ ಅಂತರವು ದಿಗ್ಭ್ರಮೆಗೊಳಿಸುವಂತಿದೆ. ಮೋದಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಇತರ ರಾಜಕೀಯ ನಾಯಕರಿಗಿಂತ ಬಹಳ ಮುಂದಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 16.1 ಮಿಲಿಯನ್ (1.61 ಕೋಟಿ) ಫಾಲೋವರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 12.6 ಮಿಲಿಯನ್ (1.26 ಕೋಟಿ) ಫಾಲೋವರ್‌ಗಳನ್ನು ಪಡೆದಿದ್ದಾರೆ.

ಪ್ರಸ್ತುತ, ಪ್ರಧಾನಿ ಮೋದಿ ಅವರು ಎರಡು ದಿನಗಳ ಇಸ್ರೇಲ್ ಪ್ರವಾಸ ಕೈಗೊಂಡಿದ್ದಾರೆ. ಒಂಬತ್ತು ವರ್ಷಗಳಲ್ಲಿ ಎರಡನೇ ಬಾರಿಗೆ ಇಸ್ರೇಲ್‌ಗೆ ಭೇಟಿ ನೀಡಿದ ಮೋದಿ ಅವರನ್ನು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮತ್ತು ಪತ್ನಿ ಸಾರಾ ಅವರು ಬೆನ್‌ ಗುರಿಯನ್‌ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ಇಸ್ರೇಲ್‌ ಸಂಸತ್ತು ಬುಧವಾರ ಮೋದಿ ಅವರಿಗೆ ‘ಸ್ಪೀಕರ್‌ ಆಫ್‌ ದಿ ಕನೆಸೆಟ್‌’ ಪದಕ ಪ್ರದಾನ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.