ADVERTISEMENT

ಮುಂಬೈ ಉಪನಗರ ರೈಲು: 11 ವರ್ಷದಲ್ಲಿ 29 ಸಾವಿರ ಸಾವು

ಪಿಟಿಐ
Published 10 ಜೂನ್ 2025, 15:55 IST
Last Updated 10 ಜೂನ್ 2025, 15:55 IST
   

ಮುಂಬೈ: ಮುಂಬೈನ ಉಪನಗರ ರೈಲು ಜಾಲದಲ್ಲಿ ಸಂಭವಿಸಿದ ಅವಘಡಗಳಲ್ಲಿ ಕಳೆದ 11 ವರ್ಷಗಳಲ್ಲಿ 29,970 ಮಂದಿ ಮೃತಪಟ್ಟಿದ್ದು, 30,214 ಜನರು ಗಾಯಗೊಂಡಿದ್ದಾರೆ ಎಂದು ರೈಲ್ವೆ ಪೊಲೀಸ್‌ ಮೂಲಗಳು ಹೇಳಿವೆ.

2014ರ ಜನವರಿಯಿಂದ ಕಳೆದ ಮೇವರೆಗೆ, ರೈಲುಗಳಿಂದ ಬಿದ್ದ ಕಾರಣ 6,760 ಪ್ರಯಾಣಿಕರು ಮೃತಪಟ್ಟಿದ್ದರೆ, 14,257 ಜನರು ಗಾಯಗೊಂಡಿದ್ದಾರೆ ಎಂದು ಇವೇ ಮೂಲಗಳು ಹೇಳಿವೆ.

ಮುಂಬೈ ಉಪನಗರ ರೈಲ್ವೆ ಜಾಲದಲ್ಲಿ ನಿತ್ಯವೂ ಅಂದಾಜು 75 ಲಕ್ಷ ಜನರು ಪ್ರಯಾಣಿಸುತ್ತಾರೆ.

ADVERTISEMENT

‘ಸುರಕ್ಷತೆಗೆ ಯೋಜನೆ’: ‘ಉಪನಗರ ರೈಲುಗಳಲ್ಲಿ ಸಂಚರಿಸುವವರ ಸುರಕ್ಷತೆ ಹಾಗೂ ಅಪಘಾತಗಳನ್ನು ತಡೆಗಟ್ಟುವುದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಸ್ಟರ್‌ ಪ್ಲಾನ್‌ ರೂಪಿಸುತ್ತಿವೆ’ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಮಂಗಳವಾರ ಹೇಳಿದ್ದಾರೆ.

‘ಮೆಟ್ರೊ ರೈಲು ಯೋಜನೆಗಳು ಪೂರ್ಣಗೊಳ್ಳುವುದು ವಿಳಂಬವಾಗುತ್ತಿದೆ. ಇದರಿಂದಾಗಿ ಉಪನಗರ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗುತ್ತಿದ್ದು, ಅಪಘಾತಗಳಿಗೂ ಕಾರಣವಾಗುತ್ತಿದೆ’ ಎಂದೂ ಹೇಳಿದ್ದಾರೆ.

* 16087 ಹಳಿ ದಾಟುವಾಗ ಮೃತಪಟ್ಟವರ ಸಂಖ್ಯೆ

* 3369 ಹಳಿ ದಾಟುವಾಗ ಗಾಯಗೊಂಡವರ ಸಂಖ್ಯೆ

* 103 ರೈಲ್ವೆ ಕಂಬಕ್ಕೆ ಡಿಕ್ಕಿ ಹೊಡೆದು ಮೃತಪಟ್ಟವರ ಸಂಖ್ಯೆ

* 655 ರೈಲ್ವೆ ಕಂಬಕ್ಕೆ ಡಿಕ್ಕಿ ಹೊಡೆದು ಗಾಯಗೊಂಡವರ ಸಂಖ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.