ADVERTISEMENT

ತಮಿಳುನಾಡಿನ ಐದು ಕಡೆ ಎನ್‌ಐಎ ದಾಳಿ: ಮೊಬೈಲ್, ಲ್ಯಾಪ್‌ಟಾಪ್ ವಶ

ಉಗ್ರರು ನುಸುಳಿರುವ ಶಂಕೆ ಹಿನ್ನೆಲೆಯಲ್ಲಿ ಕ್ರಮ

ಪಿಟಿಐ
Published 29 ಆಗಸ್ಟ್ 2019, 3:55 IST
Last Updated 29 ಆಗಸ್ಟ್ 2019, 3:55 IST
ಚಿತ್ರ ಕೃಪೆ: ಎಎನ್‌ಐ
ಚಿತ್ರ ಕೃಪೆ: ಎಎನ್‌ಐ   

ಚೆನ್ನೈ:ಉಗ್ರರು ನುಸುಳಿರುವ ಸುಳಿವು ದೊರೆತ ಹಿನ್ನೆಲೆಯಲ್ಲಿ ತಮಿಳುನಾಡಿನ ಕೊಯಮತ್ತೂರಿನ ಐದು ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಗುರುವಾರ ಬೆಳಿಗ್ಗೆ ದಾಳಿ ನಡೆಸಿದೆ.

ತಮಿಳುನಾಡು ಪೊಲೀಸರ ಜತೆ ಜಂಟಿ ದಾಳಿ ನಡೆಸಲಾಗಿದ್ದು ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌, ಸಿಮ್‌ ಕಾರ್ಡ್‌ಗಳು ಮತ್ತು ಪೆನ್‌ಡ್ರೈವ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದುಎಎನ್‌ಐಸುದ್ದಿ ಸಂಸ್ಥೆ ವರದಿ ಮಾಡಿದೆ. ಶೋಧ ಕಾರ್ಯ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಲಷ್ಕರ್‌ ಇ ತೊಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಯ 6 ಜನರ ತಂಡತಮಿಳುನಾಡಿಗೆ ನುಸುಳಿರುವ ಮಾಹಿತಿ ಇದೆ ಎಂದು ಭಾನುವಾರ (ಆಗಸ್ಟ್‌ 25ರಂದು) ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕರಾವಳಿಯ ಉಡುಪಿ, ದಕ್ಷಣ ಕನ್ನಡ ಜಿಲ್ಲೆಗಳಲ್ಲಿಯೂ ಕಟ್ಟೆಚ್ಚರ ಘೋಷಿಸಲಾಗಿತ್ತು.

ADVERTISEMENT

ಜುಲೈನಲ್ಲಿಯೂ ತಮಿಳುನಾಡಿನ ಹಲವೆಡೆ ದಾಳಿ ನಡೆಸಿದ್ದ ಎನ್‌ಐಎ, ದೇಶದಲ್ಲಿ ಭಯೋತ್ಪಾದಕ ಕೃತ್ಯ ಎಸಗುವುದಕ್ಕಾಗಿ ನಿಧಿ ಸಂಗ್ರಹಿಸುತ್ತಿದ್ದ ತಂಡವನ್ನು ಪತ್ತೆ ಮಾಡಿತ್ತು. ನಾಗಪಟ್ಟಣಂ ಜಿಲ್ಲೆಯ ಹಲವು ಪ್ರದೇಶಗಳಲ್ಲಿಯೂ ಶೋಧ ನಡೆಸಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.