ADVERTISEMENT

ಮದ್ಯಪಾನ ಮಾಡುವವರು ಮಹಾಪಾಪಿಗಳು, ಅವರು ಭಾರತೀಯರಲ್ಲ: ನಿತೀಶ್ ಕುಮಾರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಮಾರ್ಚ್ 2022, 9:26 IST
Last Updated 31 ಮಾರ್ಚ್ 2022, 9:26 IST
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್   

ಪಾಟ್ನಾ: ಮದ್ಯಪಾನ ಮಾಡುವವರು ಮಹಾಪಾಪಿಗಳು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಗುರುವಾರ ಮದ್ಯಪಾನ ನಿಷೇಧದ ಕುರಿತ ಚರ್ಚೆಯ ವೇಳೆ ಮಾತನಾಡಿದ ಅವರು, ‘ಮಹಾತ್ಮ ಗಾಂಧಿಯವರು ಕೂಡ ಮದ್ಯಪಾನ ವಿರೋಧಿಗಳಾಗಿದ್ದರು. ಅವರ ಮಾತು ಪಾಲಿಸದವರು ಮತ್ತು ಮದ್ಯಪಾನ ಮಾಡುವವರನ್ನು ಭಾರತೀಯರು ಎಂದು ನಾನು ಪರಿಗಣಿಸುವುದಿಲ್ಲ’ ಎಂದು ಹೇಳಿದ್ದಾರೆ.

ಗಾಂಧೀಜಿಯವರು ಮದ್ಯಪಾನದಿಂದಾಗುವ ಹಾನಿಯ ಕುರಿತು ಭಾಷಣ ಮಾಡಿದ್ದರು. ಮದ್ಯಪಾನ ಮಾಡುವುದು ತಪ್ಪು ಎನ್ನುವುದು ಜನರಿಗೆ ತಿಳಿದಿದ್ದರೂ, ಮತ್ತೆ ಅದನ್ನು ಮುಂದುವರಿಸುವುದು ಸರಿಯಲ್ಲ ಎಂದು ನಿತೀಶ್ ತಿಳಿಸಿದ್ದಾರೆ.

ADVERTISEMENT

ಮದ್ಯಪಾನಿಗಳ ಬಗ್ಗೆ ಯಾವುದೇ ರೀತಿಯ ಸಹಾನುಭೂತಿ ಹೊಂದುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.