ADVERTISEMENT

ಮಹಾರಾಷ್ಟ್ರ | ಶಿಂದೆ DCM ಆಗದಿದ್ದರೆ ಶಿವಸೇನೆ ಸರ್ಕಾರದ ಭಾಗವಾಗದು: ಪಕ್ಷದ ಮುಖಂಡ

ಪಿಟಿಐ
Published 5 ಡಿಸೆಂಬರ್ 2024, 9:51 IST
Last Updated 5 ಡಿಸೆಂಬರ್ 2024, 9:51 IST
<div class="paragraphs"><p>ಅಜಿತ್ ಪವಾರ್, ದೇವೇಂದ್ರ ಫಡಣವೀಸ್, ಏಕನಾಥ ಶಿಂದೆ</p></div>

ಅಜಿತ್ ಪವಾರ್, ದೇವೇಂದ್ರ ಫಡಣವೀಸ್, ಏಕನಾಥ ಶಿಂದೆ

   

ಪಿಟಿಐ ಚಿತ್ರ

ಮುಂಬೈ: ‘ಮಹಾರಾಷ್ಟ್ರ ಸರ್ಕಾರದಲ್ಲಿ ಏಕನಾಥ ಶಿಂದೆ ಅವರು ಉಪ ಮುಖ್ಯಮಂತ್ರಿ ಆಗದಿದ್ದರೆ ಪಕ್ಷದ ಯಾವ ಶಾಸಕರೂ ಸರ್ಕಾರದ ಭಾಗವಾಗಿರುವುದಿಲ್ಲ’ ಎಂದು ಶಿವಸೇನಾ ಮುಖಂಡ ಉದಯ ಸಮಂತ್ ಗುರುವಾರ ಹೇಳಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷದ ಯಾವುದೇ ಶಾಸಕರಿಗೆ ಉಪಮುಖ್ಯಮಂತ್ರಿ ಆಗಬೇಕೆಂಬ ಆಸೆಯಿಲ್ಲ. ಆ ಹುದ್ದೆ ಏನಿದ್ದರೂ ಶಿಂದೆ ಅವರದ್ದೇ. ಅವರು ಉಪಮುಖ್ಯಮಂತ್ರಿ ಸ್ಥಾನವನ್ನು ಸ್ವೀಕರಿಸಬೇಕು. ನಮ್ಮ ಬೇಡಿಕೆ ಈಡೇರಿಸುತ್ತಾರೆ ಎಂಬ ಭರವಸೆ ಇದೆ’ ಎಂದಿದ್ದಾರೆ. 

ಬಿಜೆಪಿಯ ದೇವೇಂದ್ರ ಫಡಣವೀಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಏಕನಾಥ ಶಿಂದೆ ಅವರು, ಪ್ರಸಕ್ತ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಲು ಹಿಂದೇಟು ಹಾಕಿದ್ದಾರೆ. 

ಫಡಣವೀಸ್ ಅವರು ಇಬ್ಬರು ಉಪಮುಖ್ಯಮಂತ್ರಿ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ಮುಖಂಡ ಸುಧೀರ್ ಮುಂಗಂಟಿವಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.