ADVERTISEMENT

ಜಾನಪದ ಕಲಾವಿದ, ಪದ್ಮಶ್ರಿ ಪುರಸ್ಕೃತ ಗೋಪಿನಾಥ್‌ ಸ್ವೈನ್‌ ನಿಧನ

ಪಿಟಿಐ
Published 2 ಅಕ್ಟೋಬರ್ 2025, 14:07 IST
Last Updated 2 ಅಕ್ಟೋಬರ್ 2025, 14:07 IST
ಗೋಪಿನಾಥ್‌ ಸ್ವೈನ್‌
ಗೋಪಿನಾಥ್‌ ಸ್ವೈನ್‌   

ಬೃಹಂಪುರ: ಒಡಿಶಾದ ಪ್ರಸಿದ್ಧ ಜನಪದ ನೃತ್ಯ ‘ಕೃಷ್ಣಲೀಲಾ’ದ ಗಾಯಕ, ಪದ್ಮಶ್ರಿ ಪುರಸ್ಕೃತ ಗೋಪಿನಾಥ್‌ ಸ್ವೈನ್‌ (107) ಅವರು ಗುರುವಾರ ನಿಧ‌ನರಾಗಿದ್ದಾರೆ. 

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸ್ವೈನ್‌ ಅವರು ಒಡಿಶಾದ ಗಂಜಾಂ ಜಿಲ್ಲೆಯ ಗೋಬಿಂದ್‌ಪುರದಲ್ಲಿನ ತಮ್ಮ ನಿವಾಸದಲ್ಲಿ ಕೊನೆಉಸಿರೆಳೆದಿದ್ದಾರೆ.

2024ರಲ್ಲಿ ಪದ್ಮಶ್ರೀ ಮತ್ತು 2023ರಲ್ಲಿ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರಕ್ಕೆ ಅವರು ಭಾಜನರಾಗಿದ್ದರು.

ADVERTISEMENT

1918ರಲ್ಲಿ ಜನಿಸಿದ ಸ್ವೈನ್‌ ಅವರು ತಮ್ಮ 10ನೇ ವಯಸ್ಸಿಗೆ ‘ಕೃಷ್ಣಲೀಲಾ’ ಕಲಿಯಲಾರಂಭಿಸಿದ್ದರು. ಆರಂಭದಲ್ಲಿ ಗಾಯಕ ಮತ್ತು ಕೃಷ್ಣ ಪಾತ್ರಧಾರಿಯಾಗಿದ್ದ ಸ್ವೈನ್‌ ಅವರು ಬಳಿಕ ಜನಪದ ನೃತ್ಯದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು.

ತಮ್ಮ ಗ್ರಾಮದಲ್ಲಿ ಅಖಾಡ(ಜನಪದ ನೃತ್ಯ ಶಾಲೆ)ವನ್ನು ಸ್ಥಾಪಿಸಿರುವ ಸ್ವೈನ್‌ ಅವರು ಗ್ರಾಮೀಣ ಭಾಗದ ಹಲವಾರು ಯುವಕರಿಗೆ ತರಬೇತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.